ಸೆಪ್ಟೆಂಬರ್ ತಿಂಗಳು ಮುಗಿಯಲು ಇನ್ನು ಐದು ದಿನ ಮಾತ್ರ ಬಾಕಿ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಅಮವಾಸ್ಯೆ, ನವರಾತ್ರಿ, ವಿಜಯ ದಶಮಿ ಸೇರಿದಂತೆ ಅನೇಕ ಹಬ್ಬಗಳಿವೆ. ಇದೇ ಕಾರಣಕ್ಕೆ ಅಕ್ಟೋಬರ್ ತಿಂಗಳಿನಲ್ಲಿ 21 ದಿನಗಳ ಕಾಲ ಬ್ಯಾಂಕ್ ಮುಚ್ಚಿರಲಿದೆ. ಈ ರಜಾ ದಿನಗಳು ಬೇರೆ ಬೇರೆ ರಾಜ್ಯಗಳಿಗೆ ಬೇರೆ ಬೇರೆ ರೀತಿಯಾಗಿರುತ್ತವೆ. ಎಲ್ಲ ರಾಜ್ಯಗಳಲ್ಲೂ 21 ದಿನಗಳ ಕಾಲ ಬ್ಯಾಂಕ್ ರಜೆ ಇರುವುದಿಲ್ಲ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅಕ್ಟೋಬರ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಬ್ಯಾಂಕ್ ಭಾನುವಾರದ ಹೊರತುಪಡಿಸಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಕೆಲಸ ಮಾಡುವುದಿಲ್ಲ.
ಕರ್ನಾಟಕದಲ್ಲಿ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಅಕ್ಟೋಬರ್ 2 – ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 3 – ಭಾನುವಾರ
ಅಕ್ಟೋಬರ್ 6 – ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 9 – ಎರಡನೇ ಶನಿವಾರ
ಅಕ್ಟೋಬರ್ 10 – ಭಾನುವಾರ
ಅಕ್ಟೋಬರ್ 14 – ದುರ್ಗಾ ಪೂಜೆ
ಅಕ್ಟೋಬರ್ 15 – ದಶಮಿ
ಅಕ್ಟೋಬರ್ 17 – ಭಾನುವಾರ
ಅಕ್ಟೋಬರ್ 19 – ಈದ್-ಮಿಲಾದ್
ಅಕ್ಟೋಬರ್ 23 – ನಾಲ್ಕನೇ ಶನಿವಾರ
ಅಕ್ಟೋಬರ್ 24 – ಭಾನುವಾರ
ಅಕ್ಟೋಬರ್ 31 – ಭಾನುವಾರ