ನವೆಂಬರ್ ತಿಂಗಳು ಶುರುವಾಗ್ತಿದೆ. ಹಬ್ಬದ ಋತು ಮುಂದುವರೆದಿದೆ. ನವೆಂಬರ್ ನಲ್ಲಿ ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳಿವೆ. ಹಾಗಾಗಿ ನವೆಂಬರ್ ನಲ್ಲಿ ಅನೇಕ ದಿನ ಬ್ಯಾಂಕ್ ರಜೆಯಿರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್‌ಗಳ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನವೆಂಬರ್ ನಲ್ಲಿ, ಧನ್ತೇರಸ್, ದೀಪಾವಳಿ, ಭಾಯಿ ದೂಜ್, ಛತ್ ಪೂಜೆ ಮತ್ತು ಗುರುನಾನಕ್ ಜಯಂತಿಯಂತಹ ದೊಡ್ಡ ಹಬ್ಬಗಳು ಬರುವ ಕಾರಣ ಬ್ಯಾಂಕ್ 17 ದಿನಗಳವರೆಗೆ ಬಂದ್ ಇರಲಿದೆ. ಆದ್ರೆ ಈ ರಜೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದಿನವಿರಲಿದೆ.
ನವೆಂಬರ್ 1 – ಕನ್ನಡ ರಾಜ್ಯೋತ್ಸವ ಇರುವ ಕಾರಣ ಕರ್ನಾಟಕದಲ್ಲಿ ಬ್ಯಾಂಕ್ ಬಂದ್ ಇರಲಿದೆ.
ನವೆಂಬರ್ 3 – ನರಕ ಚತುರ್ದಶಿಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜೆ ಇರುತ್ತದೆ.
ನವೆಂಬರ್ 4 – ದೀಪಾವಳಿ ಅಮವಾಸ್ಯೆ / ಕಾಳಿ ಪೂಜೆಯ ಕಾರಣ, ಕರ್ನಾಟಕ ಹೊರತುಪಡಿಸಿ ಎಲ್ಲಾ ನಗರಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ನವೆಂಬರ್ 5 – ದೀಪಾವಳಿ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ಬಂದ್ ಇರುತ್ತದೆ.
ನವೆಂಬರ್ 7 – ಭಾನುವಾರವಾದ ಕಾರಣ ಬ್ಯಾಂಕ್ ರಜೆಯಿರುತ್ತದೆ.
ನವೆಂಬರ್ 13 -ಎರಡನೇ ಶನಿವಾರ ಬ್ಯಾಂಕ್ ರಜೆ
ನವೆಂಬರ್ 14 – ಭಾನುವಾರದಂದು, ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ರಜೆ ಇರುತ್ತದೆ.
ನವೆಂಬರ್ 21 – ಭಾನುವಾರವಾಗಿರುವುದರಿಂದ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ನವೆಂಬರ್ 22 – ಕನಕದಾಸರ ಜಯಂತಿ ನಿಮಿತ್ತ ಕರ್ನಾಟಕದಲ್ಲಿ ಬ್ಯಾಂಕ್ ಗೆ ರಜೆ.
ನವೆಂಬರ್ 28 – ಭಾನುವಾರವಾಗಿರುವುದರಿಂದ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.