ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವಿದ್ರೂ ಇದೇ ತಿಂಗಳಿನಲ್ಲಿ ಮುಗಿಸಿಕೊಳ್ಳಿ. ಯಾಕೆಂದ್ರೆ ಆಗಸ್ಟ್ ನಲ್ಲಿ 15 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಆರ್‌ಬಿಐ ರಜಾ ಪಟ್ಟಿಯಲ್ಲಿ ಕೆಲವು ಪ್ರಾದೇಶಿಕ ರಜಾದಿನಗಳು ಇರುವುದರಿಂದ ದೇಶದಾದ್ಯಂತದ ಎಲ್ಲಾ ಬ್ಯಾಂಕುಗಳು 15 ದಿನಗಳವರೆಗೆ ಬಂದ್ ಇರುವುದಿಲ್ಲ. ತಿಂಗಳ 7 ದಿನ, ಭಾನುವಾರ, ಶನಿವಾರದ ಕಾರಣ ಬ್ಯಾಂಕ್ ರಜೆ ಇರಲಿದೆ.
ಆಗಸ್ಟ್ 1, 2021 ಒಂದು ಭಾನುವಾರ. ಅಂದರೆ ಆಗಸ್ಟ್ ತಿಂಗಳ ಮೊದಲ ದಿನವೇ ಬ್ಯಾಂಕ್ ರಜಾ ಇರಲಿದೆ. ಆಗಸ್ಟ್ 8, ಆಗಸ್ಟ್ 15, ಆಗಸ್ಟ್ 22 ಮತ್ತು ಆಗಸ್ಟ್ 29 ರಂದು ಭಾನುವಾರದ ಕಾರಣ ರಜೆ ಇರಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಆಗಸ್ಟ್ 14 ಮತ್ತು ಆಗಸ್ಟ್ 28 ರಂದು ಬರುವ ಕಾರಣ ಈ ದಿನವೂ ಬ್ಯಾಂಕ್ ರಜೆ ಇರಲಿದೆ.
ಉಳಿದಂತೆ ಹಬ್ಬದ ಕಾರಣದಿಂದಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದಿನ ಬ್ಯಾಂಕ್ ಮುಚ್ಚಲಿದೆ. ಕರ್ನಾಟಕದಲ್ಲಿ ಆಗಸ್ಟ್ 20ರಂದು ಮೊಹರಂ ಕಾರಣಕ್ಕೆ ಬ್ಯಾಂಕ್ ಗಳು ಮುಚ್ಚಲಿವೆ.