ಚಿಕ್ಕಮಗಳೂರು: ಸೆಂಟ್ರಲ್ ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವತ್ತಕ್ಕೂ ಹೆಚ್ಚು ಗ್ರಾಹಕರಿಂದ ಸೆಂಟ್ರಲ್ ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಹಣ, ಚಿನ್ನ ವಾಪಸ್ ನೀಡುವಂತೆ ವಂಚನೆಗೊಳಗಾದವರು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಾಲಯ ಬಳಿ ಇರುವ ಬ್ಯಾಂಕ್ ಗ್ರಾಹಕರ ಹಣ, ಚಿನ್ನ ಪಡೆದು ಬ್ಯಾಂಕ್ ಸಿಬ್ಬಂದಿ ಪರಾರಿಯಾಗಿದ್ದಾರೆ.
ಬ್ಯಾಂಕ್ ಅಧಿಕಾರಿಗಳನ್ನೇ ಸಿಬ್ಬಂದಿಯ ವಂಚನೆ ಪ್ರಕರಣ ಬೆಚ್ಚಿ ಬೀಳಿಸಿದೆ. ಗ್ರಾಹಕರ ಹೆಸರಲ್ಲಿ ಸೆಂಟ್ರಲ್ ಬ್ಯಾಂಕಿಗೆ ಸಿಬ್ಬಂದಿ ವಂಚನೆ ಮಾಡಿದ್ದಾರೆ. ಗ್ರಾಹಕರಿಗೆ ಚಿನ್ನದ ಮೇಲೆ ಬ್ಯಾಂಕ್ ಸಿಬ್ಬಂದಿ ಲೋನ್ ನೀಡುತ್ತಿದ್ದರು. ಬಳಿಕ ನಕಲಿ ಚಿನ್ನವನ್ನು ಲಾಕರ್ ನಲ್ಲಿ ಇಡುತ್ತಿದ್ದರು.
ಬ್ಯಾಂಕ್ ಲಾಕರ್ ನಲ್ಲಿ ನಕಲಿ ಚಿನ್ನ ಬಿಟ್ಟು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್ ಸೇರಿ ಐವರು ಸಿಬ್ಬಂದಿ ಕೃತ್ಯವೆಸಗಿದ್ದಾರೆ. ಗ್ರಾಹಕರ ಚಿನ್ನವನ್ನು ಸೆಂಟ್ರಲ್ ಬ್ಯಾಂಕ್ ಸಿಬ್ಬಂದಿ ಮಾರಾಟ ಮಾಡಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ನಾರಾಯಣಸ್ವಾಮಿ, ಪ್ರಶಾಂತ್, ಶ್ವೇತಾ, ಲಾವಣ್ಯ ಪರಾರಿಯಾಗಿದ್ದಾರೆ.
ವಂಚನೆ ಮಾಡಿದ ಸಿಬ್ಬಂದಿ ವಿರುದ್ಧ ಸೆಂಟ್ರಲ್ ಬ್ಯಾಂಕ್ ದೂರು ನೀಡಿದೆ. ಐವರ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಮ್ಯಾನೇಜರ್ ಸೇರಿ ಐವರು ಸಿಬ್ಬಂದಿ ಪರಾರಿಯಾಗಿದ್ದಾರೆ.