ದೀರ್ಘಾವಧಿಯ ಹೂಡಿಕೆಗಳಿಗೆ ಶೋಧಿಸುತ್ತಿರುವ ಮಂದಿಗೆ ಸ್ಥಿರ ಠೇವಣಿಗಳು ಬಹಳ ಫಲಪ್ರದವಾಗುತ್ತವೆ. ಕಡಿಮೆ ರಿಸ್ಕ್‌ನೊಂದಿಗೆ ಬರುವ ಸ್ಥಿರ ಠೇವಣಿಗಳು ವೈಕ್ತಿಗತ ಪೋರ್ಟ್‌ಫೋಲಿಯೋಗಳನ್ನು ವೈವಿಧ್ಯಮಯಗೊಳಿಸುತ್ತವೆ.
ಆದರೆ ಸ್ಥಿರ ಠೇವಣಿ ಇಡಲು ಒಳ್ಳೆಯ ಆಫರ್‌ಗಳನ್ನು ಕೊಡುವ ಬ್ಯಾಂಕುಗಳನ್ನು ಹುಡುಕುವಲ್ಲಿ ಜನರಿಗೆ ಬಹಳಷ್ಟು ಗೊಂದಲಗಳಿವೆ.
ಬ್ಯಾಂಕ್‌ಬಜ಼ಾರ್ ಪೋರ್ಟಲ್‌ನಲ್ಲಿ ಕಂಡುಬಂದ ಲೇಟೆಸ್ಟ್ ಮಾಹಿತಿ ಪ್ರಕಾರ, ದೊಡ್ಡ ಹಾಗೂ ಪ್ರತಿಷ್ಠಿತ ಬ್ಯಾಂಕುಗಳಿಗಿಂತ ಹೊಸ ಹಾಗೂ ಸಣ್ಣ ಬ್ಯಾಂಕುಗಳು ಹೆಚ್ಚಿನ ಬಡ್ಡಿ ದರಗಳನ್ನು ಕೊಡುತ್ತಿವೆ.
ಇಂದು ನಡೆಯುತ್ತಿರುವ ಕೇಂದ್ರ ಸಂಪುಟ ಸಭೆಗಿದೆ ಈ ʼವಿಶೇಷತೆʼ
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಮೇಲೆ 7% ಬಡ್ಡಿ ದರ ಕೊಡುತ್ತಿವೆ. ಇದರೊಂದಿಗೆ ಡಿಸಿಬಿ ಬ್ಯಾಂಕ್ 6.75% ಬಡ್ಡಿ ದರವನ್ನು ಕೊಡುತ್ತಿದ್ದು, ಆರ್‌ಬಿಎಲ್ ಬ್ಯಾಂಕ್ (6.25%) ಮತ್ತು ಬಂಧನ್ ಬ್ಯಾಂಕ್ (6%) ಪಟ್ಟಿಯಲ್ಲಿವೆ.
ಇದಕ್ಕೆ ಹೋಲಿಸಿದಲ್ಲಿ, ದೊಡ್ಡ ಬ್ಯಾಂಕುಗಳಾದ ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕುಗಳಲ್ಲಿ 3-3.5% ಬಡ್ಡಿ ದರವನ್ನು ಸ್ಥಿರ ಠೇವಣಿಗಳ ಮೇಲೆ ಕೊಡಲಾಗುತ್ತಿದೆ. ಕೋಟಕ್ ಮಹಿಂದ್ರಾ ಬ್ಯಾಂಕ್ 4%ನಷ್ಟು ಬಡ್ಡಿದರ ಕೊಟ್ಟರೆ, ಎಸ್‌ಬಿಐ 2.7% ಹಾಗೂ ಬ್ಯಾಂಕ್ ಆಫ್ ಬರೋಡಾ 3.2%ರವರೆಗೆ ಬಡ್ಡಿ ದರವನ್ನು ಸ್ಥಿರ ಠೇವಣಿಗಳ ಮೇಲೆ ಕೊಡುತ್ತಿವೆ.