ದೇಶದ 43 ಗ್ರಾಮೀಣ ಬ್ಯಾಂಕುಗಳಲ್ಲಿ ಆಫೀಸ್ ಅಸಿಸ್ಟೆಂಟ್, ಆಫೀಸರ್ ಸೇರಿದಂತೆ 8106 ಹುದ್ದೆಗಳ ನೇಮಕಾತಿ ಪರೀಕ್ಷೆ ಐಬಿಪಿಎಸ್ ಮೂಲಕ ನಡೆಯಲಿದೆ. ಕನ್ನಡ, ಕೊಂಕಣಿ, ಇಂಗ್ಲಿಷ್, ಹಿಂದಿಯಲ್ಲಿಯೂ ಪರೀಕ್ಷೆ ಬರೆಯಬಹುದಾಗಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕ ಹಾಗೂ ಜಿಎಸ್ಟಿ ಕಟ್ಟಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷಚೇತನರು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂಪಾಯಿ ಅರ್ಜಿ ಶುಲ್ಕವಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು ಇಂಟಿಮೇಷನ್ ಶುಲ್ಕ ಪ್ರತ್ಯೇಕವಾಗಿ ಪಾವತಿಸಬೇಕಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. https://www.ibps.in/ ವೆಬ್ಸೈಟ್ ಮೂಲಕ ಜೂನ್ 27 ರೊಳಗೆ ಹೆಸರು ನೋಂದಾಯಿಸಬೇಕು. 200 ನಗರಗಳಲ್ಲಿ ಪ್ರಿಲಿಮ್ಸ್ ಪರೀಕ್ಷೆ ಆಗಸ್ಟ್ 28, ಸೆಪ್ಟೆಂಬರ್ 3, 4 ರಂದು ಆನ್ಲೈನ್ ಮೂಲಕ ನಡೆಯಲಿದೆ. 80 ನಗರಗಳಲ್ಲಿ ಮುಖ್ಯ ಪರೀಕ್ಷೆ ಅಕ್ಟೋಬರ್ 8 ರಂದು ನಡೆಯಲಿದೆ.