ಇತ್ತೀಚಿನ ದಿನಗಳಲ್ಲಿ ಜನರು, ತಮ್ಮ ಆಭರಣಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸುತ್ತಾರೆ. ಇದರಿಂದ ದುಬಾರಿ ವಸ್ತುಗಳು ಸುರಕ್ಷಿತವಾಗಿರುತ್ತವೆ. ಆರ್‌ಬಿಐನ ಹೊಸ ನಿಯಮಗಳ ಪ್ರಕಾರ, ದೀರ್ಘಕಾಲದವರೆಗೆ ಲಾಕರ್ ತೆರೆಯದಿದ್ದರೆ, ಬ್ಯಾಂಕುಗಳು ಲಾಕರ್ ಮುರಿಯುವ ಸಾಧ್ಯತೆಯಿದೆ.
ಭಾರತೀಯ ರಿಸರ್ವ್ ಬ್ಯಾಂಕ್, ಸುರಕ್ಷಿತ ಠೇವಣಿ ಲಾಕರ್‌ಗಳ ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡಿದೆ. ಈ ಹೊಸ ಮಾರ್ಗಸೂಚಿಯಲ್ಲಿ, ಬ್ಯಾಂಕುಗಳಿಗೆ ಲಾಕರ್ ತೆರೆಯಲು ಅವಕಾಶ ನೀಡಲಾಗಿದೆ. ಬಾಡಿಗೆಯನ್ನು ನಿಯಮಿತವಾಗಿ ಪಾವತಿಸುತ್ತಿದ್ದು, ಲಾಕರ್ ದೀರ್ಘಕಾಲ ತೆರೆಯದಿದ್ದರೆ, ಬ್ಯಾಂಕ್ ಗಳು ಲಾಕರ್ ತೆರೆಯಬಹುದಾಗಿದೆ.
ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಬ್ಯಾಂಕ್, ಲಾಕರ್ ಬಾಡಿಗೆದಾರರಿಗೆ ಪತ್ರದ ಮೂಲಕ ನೋಟಿಸ್ ನೀಡುತ್ತದೆ. ನೋಂದಾಯಿತ ಇಮೇಲ್ ಐಡಿ ಮತ್ತು ಮೊಬೈಲ್ ಫೋನ್ ಸಂಖ್ಯೆಗೆ ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಅಲರ್ಟ್ ಮಾಡಲಾಗುತ್ತದೆ. ಅಲ್ಲದೆ ಲಾಕರ್ ವ್ಯಕ್ತಿಗೆ ಉತ್ತರ ನೀಡಲು ಬ್ಯಾಂಕ್ ಸಮಯ ನೀಡುತ್ತದೆ. ಲಾಕರ್ ಓಪನ್ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.