ಕೊಪ್ಪಳ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಹಾಗೂ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳ ಮೊತ್ತವನ್ನು ಇತ್ಯರ್ಥಪಡಿಸಲು ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಮತ್ತು ಎನ್ಪಿಸಿಐ ಜೋಡಣೆಗೆ ನಿಗದಿಪಡಿಸಿದ ನಮೂನೆಯಲ್ಲಿ ಬ್ಯಾಂಕಿನಲ್ಲಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಆದರೆ, ರೈತರು ತಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡದೇ ಇರುವ ಕಾರಣ ಜಿಲ್ಲೆಯಲ್ಲಿ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕೊಪ್ಪಳ ತಾಲೂಕಿನಲ್ಲಿ 436, ಕುಷ್ಟಗಿ ತಾಲೂಕಿನಲ್ಲಿ 526, ಯಲಬುರ್ಗಾ ತಾಲೂಕಿನಲ್ಲಿ 610, ಗಂಗಾವತಿ ತಾಲೂಕಿನಲ್ಲಿ 566 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2138 ಫಲಾನುಭವಿಗಳ ಎನ್ಪಿಸಿಐ ಜೋಡಣೆಯು ವೈಫಲ್ಯಗೊಂಡಿರುತ್ತದೆ.
ಬೆಳೆವಿಮೆ ಯೋಜನೆಯಡಿಯಲ್ಲಿ 2019-20 ನೇ ಸಾಲಿನಲ್ಲಿ ಕೊಪ್ಪಳ ತಾಲೂಕಿನಲ್ಲಿ 423, ಕುಷ್ಟಗಿ ತಾಲೂಕಿನಲ್ಲಿ 503, ಯಲಬುರ್ಗಾ ತಾಲೂಕಿನಲ್ಲಿ 955, ಗಂಗಾವತಿ ತಾಲೂಕಿನಲ್ಲಿ 456 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2337 ಫಲಾನುಭವಿಗಳ ಬ್ಯಾಂಕ್ ಖಾತೆಯು ಎನ್ಪಿಸಿಐ ಗೆ ಜೋಡಣೆಯಾಗಲು ವೈಫಲ್ಯಗೊಂಡಿರುತ್ತದೆ.
ಆದ್ದರಿಂದ ಎನ್ಪಿಸಿಐ ಜೋಡಣೆ ವೈಫಲ್ಯಗೊಂಡಿರುವ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯೊಂದಿಗೆ ಎನ್ಪಿಸಿಐ ಜೋಡಣೆಗೆ ಸಂಬಂಧಿಸಿದ ಬ್ಯಾಂಕ್ ನಲ್ಲಿ ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿಮಾಡಿ ಮಾಹಿತಿ ನೀಡಲು ಕೋರಲಾಗಿದೆ. ಎನ್ಪಿಸಿಐ ವೈಫಲ್ಯಗೊಂಡಿರುವ ಫಲಾನುಭವಿಗಳ ವಿವರವನ್ನು ರೈತರ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಪ್ರದರ್ಶಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.