ಶೇಖ್ ಹಸೀನಾ ರಾಜೀನಾಮೆ ನೀಡಿ ಬಾಂಗ್ಲಾದೇಶ ಕಾಲ್ಕಿತ್ತ ನಂತ್ರ ದೇಶದಲ್ಲಿ ಹಿಂದೂಗಳ ಸ್ಥಿತಿ ಚಿಂತಾಜನಕವಾಗಿದೆ. ಹಿಂದುಗಳ ಮೇಲೆ ದೌರ್ಜನ್ಯಗಳು ಪ್ರಾರಂಭವಾಗಿವೆ. ಬಾಂಗ್ಲಾದೇಶದ ವಿವಿಧ ಸ್ಥಳಗಳಲ್ಲಿ ಹಿಂದೂ ದೇವಾಲಯಗಳು ಮತ್ತು ಹಿಂದೂ ಸಮುದಾಯದ ಮೇಲೆ ದಾಳಿಗಳು ವರದಿಯಾಗಿವೆ. ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗ್ತಿದೆ. ಇಸ್ಕಾನ್ ಮತ್ತು ಕಾಳಿ ದೇವಸ್ಥಾನದ ಮೇಲೆ ದಾಳಿಗಳು ವರದಿಯಾಗಿವೆ.
ದೇವಾಲಯಗಳ ಮೇಲಿನ ದಾಳಿಗಳ ನಡುವೆ, ಕೆಲವು ನೆಮ್ಮದಿಯ ಸುದ್ದಿ ಎಂದರೆ ಅನೇಕ ಸ್ಥಳಗಳಲ್ಲಿ ಮುಸ್ಲಿಮರು, ಹಿಂದೂ ಸಮುದಾಯವನ್ನು ರಕ್ಷಿಸಲು ಮುಂದಾಗಿದ್ದಾರೆ. ಹಿಂದೂ ಅಲ್ಪಸಂಖ್ಯಾತರನ್ನು ರಕ್ಷಿಸಲು ಬಾಂಗ್ಲಾದೇಶದ ಕೆಲವು ಮಸೀದಿಗಳಿಗೆ ಮನವಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳು ವೈರಲ್ ಆಗಿವೆ. ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡಿದ್ದ ಕೆಲವರು, ದೇವಸ್ಥಾನದ ಮುಂದೆ ಕುಳಿತು ದೇವಸ್ಥಾನ ರಕ್ಷಣೆ ಕೆಲಸವನ್ನು ಮಾಡಿದ್ದರು. ಮುಸ್ಲಿಂ ಸಮುದಾಯದ ಜನರು, ಹಿಂದೂ ದೇವಸ್ಥಾನವನ್ನು ಕಾಯುವ ಹೊಣೆ ಹೊತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅದ್ರ ಫೋಟೋ ವೈರಲ್ ಆಗಿದೆ. ಆದ್ರೆ ಫೋಟೋ ವೈರಲ್ ಆಗ್ತಿದ್ದಂತೆ ದೇವಸ್ಥಾನದ ಮುಂದೆ ಕುಳಿತಿದ್ದ ಮುಸ್ಲಿಂ ಜನಾಂಗದ ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಅದೇನೇ ಇರಲಿ, ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.