ಢಾಕಾ: ಬಾಂಗ್ಲಾದೇಶದಲ್ಲಿ ದೇಶದ್ರೋಹದ ಆರೋಪದ ಮೇಲೆ ಹಿಂದೂ ಪರ ವಕೀಲ ಇಸ್ಕಾನ್ ದೇವಾಲಯದ ಅರ್ಚಕ ಚಿನ್ಮಯ್ ಕೃಷ್ಣದಾಸ್ ಬ್ರಹ್ಮಚಾರಿ ಅವರನ್ನು ಬಂಧಿಸಲಾಗಿದೆ. ಇದು ಹಿಂದೂ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಬೃಹತ್ ಇಂದು ರ್ಯಾಲಿ ನಡೆಸಲಾಗಿದೆ. ಹಿಂದುಗಳ ಮೇಲಿನ ದೌರ್ಜನ್ಯ ವಿರೋಧಿಸಿ ರ್ಯಾಲಿ ನಡೆಸಲಾಗಿದ್ದು, ಈ ವೇಳೆ ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪರ ವಕೀಲರಾಗಿರುವ ಇಸ್ಕಾನ್ ಅರ್ಚಕ ಚಿನ್ಮಯ್ ಕೃಷ್ಣದಾಸ್ ಬ್ರಹ್ಮಚಾರಿ ಅವರನ್ನು ಬಂಧಿಸಲಾಗಿದೆ.
ಢಾಕಾ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಮುಖ್ಯ ನಾಯಕ ಚಿನ್ಮಯ್ ಕೃಷ್ಣದಾಸ್ ಬ್ರಹ್ಮಚಾರಿ ಅವರನ್ನು ಬಂಧಿಸಲಾಗಿದ್ದು, ಪೊಲೀಸ್ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಇದು ಆಘಾತಕಾರಿ ಎಂದು ರಾಧಾ ರಮಣದಾಸ್ ಎಂಬುವರು ಮಾಹಿತಿ ನೀಡಿದ್ದಾರೆ.
I just received the shocking news that Chinmoy Krishna Das Brahmachari, a Hindu monk & the face and leader of Bangladeshi minorities in this difficult times, has been arrested by the Dhaka police and taken to an undisclosed location. Kind attention @ihcdhaka @DrSJaishankar… pic.twitter.com/J9MszoBUvy
— Radharamn Das राधारमण दास (@RadharamnDas) November 25, 2024