ಬಾಂಗ್ಲಾದೇಶದ ಕರತೋಯಾ ನದಿಯಲ್ಲಿ ಭಾನುವಾರ ದೋಣಿ ಮುಳುಗಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ನಾವು 23 ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಅಗ್ನಿಶಾಮಕ ದಳದವರು ಮತ್ತು ರಕ್ಷಣಾ ಸಿಬ್ಬಂದಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಶಫೀಕುಲ್ ಇಸ್ಲಾಂ ತಿಳಿಸಿದ್ದಾರೆ.
ಶತಮಾನಗಳಷ್ಟು ಹಳೆಯದಾದ ದೇವಾಲಯಕ್ಕೆ ಹೋಗುತ್ತಿದ್ದ 70 ಕ್ಕೂ ಅಧಿಕ ಯಾತ್ರಾರ್ಥಿಗಳಿಂದ ದೋಣಿ ತುಂಬಿತ್ತು. ಉತ್ತರ ಬಾಂಗ್ಲಾದೇಶದ ಬೋಡಾ ಪಟ್ಟಣದ ಸಮೀಪವಿರುವ ಕರಾಟೋಯಾ ನದಿಯ ಮಧ್ಯದಲ್ಲಿ ಹಠಾತ್ತನೆ ತಿರುಗಿ ಮುಳುಗಿದೆ.
ಪತ್ತೆಯಾದ ಶವಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಪಘಾತ ಸಂಭವಿಸಿದ ಉತ್ತರ ಪಂಚಗಢದ ಜಿಲ್ಲಾ ಆಡಳಿತಾಧಿಕಾರಿ ಜಹುರುಲ್ ಇಸ್ಲಾಂ ಹೇಳಿದ್ದಾರೆ.