ಧಾರಾವಾಹಿಗಳ ದೃಶ್ಯಗಳನ್ನು ಕೊರಿಯೋಗ್ರಾಫ್ ಮಾಡುವ ವೇಳೆ ಮಾಡುವ ಅವಾಂತರಗಳು ನೆಟ್ಟಿಗರಿಗೆ ಸಿಕ್ಕಿಬಿಟ್ಟರೆ ಭಾರೀ ಟ್ರೋಲ್ ಮಾಡಿ ಹಬ್ಬ ಮಾಡಿಬಿಡುತ್ತಾರೆ.
ಬಾಂಗ್ಲಾ ಧಾರಾವಾಹಿ ’ಜಮುನಾ ಢಾಕಿ’ಯ ಸೀನ್ ಒಂದರಲ್ಲಿ ಮುಂಚೂಣಿ ನಟ ನಿಂತುಕೊಂಡೇ ಡ್ರಮ್ ಬಾರಿಸುತ್ತಿರುವ ದೃಶ್ಯವೊಂದು ಟ್ರೋಲ್ ಆಗಿದೆ. ಈ ಬೇಸ್ ಬ್ಯಾಂಡ್‌ಗಳನ್ನು ತೀರಾ ನಿಂತುಕೊಂಡೇ ಬಾರಿಸುತ್ತಿರುವ ಜಮುನಾ ಪಾತ್ರಧಾರಿ, ಅದೆಷ್ಟು ಸುಲಭವಾಗಿ ಈ ಬ್ಯಾಂಡ್ ಬಾರಿಸಲು ಸಾಧ್ಯ ? ಎಂದು ನೆಟ್ಟಿಗರು ಹೌಹಾರಿದ್ದಾರೆ.
”ಜಮುನಾ ಹೊಸ ಬ್ಯಾಂಡ್ ಸೇರಿದಳು” ಎಂದು ಕ್ಯಾಪ್ಷನ್ ಹಾಕಿ ಈ ದೃಶ್ಯವನ್ನು ಫೇಸ್ಬುಕ್‌ನಲ್ಲಿ ಶೇರ್ ಮಾಡಲಾಗಿದೆ.
ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಬರೋಬ್ಬರಿ 12 ದಿನ ರಜೆ ಕಾರಣ ಬ್ಯಾಂಕ್ ಬಂದ್, ನಿಮ್ಮ ವ್ಯವಹಾರದ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ
“ಜಮುನಾ ದಿ ಸೂಪರ್ ವುಮನ್” ಎಂದು ಒಬ್ಬ ಬಳಕೆದಾರರು ಹೇಳಿದರೆ, “ಈ ಸೀನ್‌ಗಳನ್ನೆಲ್ಲಾ ನೋಡುವಾಗ ನನ್ನ ತಾಯಿ ಅಳುತ್ತಾರೆ !!! ಏನು ಮಾಡಬೇಕೆಂದು ನನಗೆ ಗೊತ್ತಾಗುವುದಿಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ.
https://www.youtube.com/watch?v=WduaqsdUi1o&feature=youtu.be