ಬೆಂಗಳೂರು: ಬಾಂಗ್ಲಾದೇಶದ ಯುವತಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಶದಲ್ಲಿದ್ದ ಯುವತಿಯರ ಬಗ್ಗೆ ಮಾಹಿತಿ ಕಲೆ ಹಾಕಲು ಎನ್ಐಎ ಮುಂದಾಗಿದೆ.
ರಾಷ್ಟ್ರೀಯ ತನಿಖಾದಳ ಯುವತಿಯರ ಮಾಹಿತಿ ಮತ್ತು ಸ್ಥಳೀಯ ತನಿಖೆಯ ಮಾಹಿತಿಯನ್ನು ಕೇಳಿದೆ. ಬೆಂಗಳೂರಿನಲ್ಲಿ ಮೇ 27 ರಂದು ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಶದಲ್ಲಿದ್ದ 7 ಯುವತಿಯರನ್ನು ವಶಕ್ಕೆ ಪಡೆಯಲಾಗಿತ್ತು. ಭಾರತೀಯ ನಕಲಿ ದಾಖಲೆಯ ಸಹಿತ ಯುವತಿಯರನ್ನು ವಶಕ್ಕೆ ಪಡೆದು, ಬಳಿಕ ಪ್ರಕರಣವನ್ನು ಹೆಣ್ಣೂರು ಠಾಣೆಗೆ ವರ್ಗಾಯಿಸಲಾಗಿತ್ತು. ನಕಲಿ ದಾಖಲೆ ಸೃಷ್ಟಿಸಿ ಯುವತಿಯರನ್ನು ಕರೆತರಲಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಸರಿಯಾಗಿದೆ NIA ಎಂಟ್ರಿಯಾಗಿದೆ ಎನ್ನಲಾಗಿದೆ.