ಬೆಂಗಳೂರು: ಬಾಂಗ್ಲಾದಿಂದ ಅಪ್ರಾಪ್ತ ಯುವತಿಯರನ್ನು ಕರೆತಂದು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿ ಹೊಂಗಸಂದ್ರದ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಅಪ್ರಾಪ್ತ ಯುವತಿಯರನ್ನು ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಸಾಫ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಇಬ್ಬರು ಒಡಿಶಾ ಮೂಲದವರಾಗಿದ್ದು, ಓರ್ವ ಬೆಂಗಳೂರು ಮೂಲದವನಾಗಿದ್ದಾನೆ. ಸೂರಜ್ ಸಾಹಜಿ, ಕರಿಷ್ಮಾ ಶೇಕ್, ಸುಬ್ರಹ್ಮಣ್ಯ ಶಾಸ್ತ್ರಿ ಬಂಧಿತ ಆರೋಪಿಗಳು. ಸುಬ್ರಹ್ಮಣ್ಯ ಶಾಸ್ತ್ರಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಹೊಗಸಂದ್ರದ ನಿವಾಸಿಯೇ ಆಗಿದ್ದಾನೆ. ಅಪ್ರಾಪ್ತ ಬಾಲಕಿಯರೇ ಬೇಕೆಂದು ಸುಬ್ರಹ್ಮಣ್ಯ ಶಾಸ್ತ್ರಿ ಹೇಳುತ್ತಿದ್ದನಂತೆ ಇದೇ ಕಾರಣಕ್ಕೆ ಬಾಂಗ್ಲಾದಿಂದ ಅಪ್ರಾಪ್ತೆಯರನ್ನು ಉಳಿದ ಇಬ್ಬರು ಆರೋಪಿಗಳು ಕರೆತರುತ್ತಿದ್ದರಂತೆ. ವಿಚಾರಣೆ ವೇಳೆ ಆರೋಪಿಗಳು ಹಲವು ವಿಷಯ ಬಾಯ್ಬಿಟ್ಟಿದ್ದಾರೆ.
15 ಹಾಗೂ 6 ವರ್ಷದ ಬಾಂಗ್ಲಾ ಮೂಲದ ಹುಡುಗಿರಯರನ್ನು ಕರೆತಂದು ಹೊಂಗಸಂದ್ರದ ಮನೆಯಲ್ಲಿಟ್ಟು ಅವರಿಂದ ವೇಶ್ಯಾವಾಟಿಕೆ ದಂಧೆ ಮಾಡಿಸಲಾಗುತ್ತಿತ್ತು ಎಂಬುದು ಬಯಲಾಗಿದೆ. ಪೊಕ್ಸೋ ಕಾಯ್ದೆಯಡಿ ಹಾಗೂ ಅಪ್ರಾಪ್ತೆಯರ ಕಳ್ಳಸಾಗಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.