
ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದ ವಿವಿಧ ಬ್ರ್ಯಾಂಡ್ ಗಳ ವಿದೇಶಿ ಸಿಗರೇಟ್ ಗಳನ್ನು ಬೆಂಕಿ ಹಚ್ಚಿ ನಾಶ ಪಡಿಸಲಾಗಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಒಟ್ಟು 7.30 ಲಕ್ಷ ವಿದೇಶಿ ಸಿಗರೇಟ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದರು.
ಸುಮಾರು 1.46 ಕೋಟಿ ಮೌಲ್ಯದಷ್ಟಿದ್ದ ವಿದೇಶಿ ಸಿಗರೇಟ್ ಗಳನ್ನು ಅಧಿಕಾರಿಗಳು ಬೆಂಕಿಗೆ ಹಾಕಿ ನಾಶಪಡಿಸಿದ್ದಾರೆ ಎಂದು ತಿಳಿದುಬಂದಿದೆ.