alex Certify ALERT : ಬೆಂಗಳೂರಿನ ಮಹಿಳೆಯರ ನಿದ್ದೆಗೆಡಿಸಿದ ಮತ್ತೊಬ್ಬ ಉಮೇಶ್ ರೆಡ್ಡಿ, ಒಂಟಿ ಮಹಿಳೆಯರೇ ಟಾರ್ಗೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಬೆಂಗಳೂರಿನ ಮಹಿಳೆಯರ ನಿದ್ದೆಗೆಡಿಸಿದ ಮತ್ತೊಬ್ಬ ಉಮೇಶ್ ರೆಡ್ಡಿ, ಒಂಟಿ ಮಹಿಳೆಯರೇ ಟಾರ್ಗೆಟ್

ಬೆಂಗಳೂರು : ಬೆಂಗಳೂರಿನ ಹಲವು ಕಡೆ ಮತ್ತೆ ವಿಕೃತ ಕಾಮಿಯೊಬ್ಬ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದಾನೆ.

ಲಗ್ಗೆರೆಯ ವಿಧಾನಸೌಧ ಲೇಔಟ್ ಸುತ್ತಮುತ್ತಾ ಈತ ಕಾಣಿಸಿಕೊಂಡಿದ್ದಾನೆ ಎನ್ನಲಾಗಿದ್ದು, ಒಂಟಿ ಮನೆಯಲ್ಲಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದಾನೆ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ವಿಕೃತ ಕಾಮಿಯೊಬ್ಬ ಮಹಿಳೆಯರ ಹಾಸ್ಟೆಲ್ ಗೆ ನುಗ್ಗಿ ಅವಾಂತರ ಮಾಡಿದ ಘಟನೆ ವರದಿಯಾಗಿತ್ತು. ಈ ಬೆನ್ನಲ್ಲೇ ಮತ್ತೆ ಆತಂಕ ಸೃಷ್ಟಿಯಾಗಿದೆ.ವಿಕೃತ ಕಾಮಿ ಉಮೇಶ್ ರೆಡ್ಡಿ, ಸೈಕೋ ಜೈಶಂಕರ್ ಬಂಧನ ನಂತರ ಮತ್ತೊಬ್ಬ ಸೈಕೋ ಮಹಿಳೆಯನ್ನ ಕಾಡಲಾರಂಭಿಸಿದ್ದಾನೆ.

ಸ್ನಾನದ ಮನೆಗೆ ನುಗ್ಗಿ ಮಹಿಳೆಯರು ಸ್ನಾನ ಮಾಡುವುದನ್ನು ರೆಕಾರ್ಡ್ ಮಾಡುವುದು, ಮಹಿಳೆಯರ ಒಳ ಉಡುಪು ಕದಿಯುವ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಭಯಭೀತರಾದ ಜನರು ರಾಜ ಗೋಪಾಲನಗರ ಠಾಣೆಗೆ ದೂರು ನೀಡಿದ್ದಾರೆ. ಸದ್ಯ, ಪೊಲೀಸರು ವಿಕೃತ ಕಾಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...