ಬೆಂಗಳೂರು : ಬೆಂಗಳೂರಿಗರೇ ಕ್ರಿಸ್ಮಸ್, ಹೊಸ ವರ್ಷದ ಪಾರ್ಟಿ ಅಂತ ಹೇಳಿ ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ್ರೆ ಎಚ್ಚರ..ನಿಮ್ಮ ಗಾಡಿ ಸೀಜ್ ಆಗಲಿದೆ.
ಯೆಸ್, ಬೆಂಗಳೂರು ಪೊಲೀಸರು ನಗರದಲ್ಲಿ ಅಲರ್ಟ್ ಆಗಿದ್ದು, ನಗರದಾದ್ಯಂತ ಟ್ರಾಫಿಕ್ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಆರಂಭಿಸಿದ್ದಾರೆ . ಈ ಕುರಿತು ನಗರ ಪೊಲೀಸ್ ಆಯುಕ್ತ ದಯಾನಂದ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರದಾದ್ಯಂತ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದು, ಕುಡಿದು ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿಬಿದ್ದರೆ ದಂಡ ವಿಧಿಸಿ ಗಾಡಿಯನ್ನು ಸೀಜ್ ಮಾಡಲಾಗುತ್ತದೆ, ನಂತರ ನೀವು ಕೋರ್ಟ್ ನಲ್ಲಿ ದಂಡ ಪಾವತಿ ಮಾಡಿ ವಾಹನ ಬಿಡಿಸಿಕೊಳ್ಳಬೇಕಾಗುತ್ತದೆ…ಸೋ ಬೀ ಕೇರ್ ಫುಲ್.
ನಗರದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಹೊಸ ವರ್ಷಾಚರಣೆ ಪಾರ್ಟಿ ಹಾಗೂ ಕ್ರಿಸ್ ಮಸ್ ಪಾರ್ಟಿಗಳು ನಡೆಯುವ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದಾರೆ.