
ಬೆಂಗಳೂರು: ಬೆಂಗಳೂರು ಹ್ರವಲಯದ ಶೆಡ್ ನಲ್ಲಿ ಜೋಡಿ ಕೊಲೆಯಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಸಿಂಗಹಳ್ಳೊ ಗ್ರಾಮದಲ್ಲಿ ಎಸ್.ಆರ್. ಎಸ್ ಟ್ರಾವೆಲ್ಸ್ ಬಸ್ ಗಳನ್ನು ನಿಲ್ಲಿಸುವ ಜಾಗದಲ್ಲಿ ಈ ಕೊಲೆ ನಡೆದಿದೆ.
ಎಸ್.ಆರ್.ಎಸ್ ಟ್ರಾವೆಲ್ಸ್ ಬಸ್ ಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬರ್ಬರವಾಗಿ ಕೊಲೆಯಾಗಿದ್ದಾರೆ. ನಾಗೇಶ್ (55) ಹಾಗೂ ಮಂಜುನಾಥ್ (50) ಮೃತ ದುರ್ದೈವಿಗಳು.
ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಕೊಲೆಯಾಗಿರುವ ಸಾಧ್ಯತೆ ಇದೆ. ಘಟನಾ ಸ್ಥಳಕ್ಕೆ ಬಾಗಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.