ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ತಿರುಮಲ ಶೆಟ್ಟಿಹಳ್ಳಿ -ಚನ್ನಸಂದ್ರ ಮುಖ್ಯ ರಸ್ತೆಯ ಎಸ್.ಪಿ.ಜಿ. ಆಸ್ಪತ್ರೆ ಮೇಲೆ ಬುಧವಾರ ರಾತ್ರಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದ ದಾಳಿಯ ಸಂದರ್ಭದಲ್ಲಿ ರೆಡ್ ಹ್ಯಾಂಡಾಗಿ ಭ್ರೂಣ ಪತ್ತೆಯಾಗಿದೆ.
ಆಸ್ಪತ್ರೆಯನ್ನು ಸೀಜ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ದಾಳಿಯ ವೇಳೆ ಆಸ್ಪತ್ರೆಯ ಮಾಲೀಕನಾಗಿರುವ ವೈದ್ಯ ಪರಾರಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಭ್ರೂಣ ಸಿಕ್ಕಿರುವುದು ರಾಜ್ಯದಲ್ಲಿಯೇ ಇದು ಪ್ರಥಮವಾಗಿದೆ. ಆಸ್ಪತ್ರೆಯನ್ನು ಸೀಜ್ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಒಂದೇ ದಿನ ಎರಡು ಭ್ರೂಣ ಹತ್ಯೆಯಾದ ಬಗ್ಗೆ ಸ್ಥಳೀಯರಿಂದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದ್ದು, ದಾಳಿ ನಡೆಸಲಾಗಿದೆ. ಒಂದು ಭ್ರೂಣ ಸಿಕ್ಕಿದೆ. ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.