ಬೆಂಗಳೂರು : ಬೆಂಗಳೂರು ರೇವ್ ಪಾರ್ಟಿ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು, ಈ ಬಗ್ಗೆ ಸ್ಪೋಟಕ ಮಾಹಿತಿ ಬಯಲಾಗಿದೆ. ಅಲ್ಲಿ ನಡೆದಿದ್ದು ಬರ್ತ್ ಡೇ ಪಾರ್ಟಿ ಅಲ್ಲ ಡ್ರಗ್ಸ್, ಸೆಕ್ಸ್ ಪಾರ್ಟಿ ಎಂದು ಹೇಳಲಾಗಿದೆ.
ಬರ್ತಡೆ ಸೆಲೆಬ್ರೇಷನ್ ಹೆಸರಲ್ಲಿ ಪಾರ್ಟಿ ನಡೆಸಲಾಗುತ್ತಿತ್ತು. ಇಲ್ಲಿ ಡ್ರಗ್ಸ್ ಮಾತ್ರ ಅಲ್ಲ ಸೆಕ್ಸ್ ಸಹ ಇತ್ತು ಎಂಬ ಅಚ್ಚರಿ ಮಾಹಿತಿ ತಿಳಿದುಬಂದಿದೆ. ಡ್ರಗ್ಸ್ ಜಾಲದ ಜೊತೆಗೆ ಸೆಕ್ಸ್ ಜಾಲದ ಬಗ್ಗೆ ಸಿಸಿಬಿಗೆ ಕೆಲ ಮಾಹಿತಿಗಳು ಲಭ್ಯವಾಗಿವೆ. ಈ ಹಿನ್ನೆಲೆ ಹಲವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಹಲವರು ಎಸ್ಕೇಪ್ ಆಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಪಾರ್ಟಿಯಲ್ಲಿ ಒಟ್ಟು 250ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು ಎಂಬ ಶಂಕೆ ವ್ಯಕ್ತವಾಗಿದ್ದು ಹಲವಾರು ಜನರು ಶನಿವಾರ ಪಾರ್ಟಿಗೆ ಬಂದು ವಾಪಸ್ಸು ಹೋಗಿದ್ದಾರೆ.
ಪ್ರಕರಣದ ಬಗ್ಗೆ ಸಿಸಿಬಿ ಪೊಲೀಸರಿಗೆ ಕಮಿಷನರ್ ಬಿ ದಯಾನಂದ ಖಡಕ್ ಸೂಚನೆ ನೀಡಿದ್ದು, ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಎಂದು ಸೂಚನೆ ನೀಡಿದ್ದಾರೆ.