ರಾಜ್ಯ ರಾಜಧಾನಿ ಬೆಂಗಳೂರು ಮಳೆಯಿಂದ ತತ್ತರಿಸಿ ಹೋಗಿದೆ. ರಸ್ತೆಗಳು ಜಲಾವೃತವಾಗಿದ್ದು, ಇದರ ನಡುವೆಯೂ ವಾಹನ ಸವಾರರು ಸಂಚಾರಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆ. ಬೆಂಗಳೂರಿನ ರಸ್ತೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದು, ನಂಬಲೇ ಕಷ್ಟವಾಗುವಂತಿದೆ.
ರಸ್ತೆಯಿಂದ ಒಂದೆರಡು ಅಡಿಗಳಷ್ಟು ಮೇಲೆ ನೀರು ಹರಿಯುತ್ತಿದ್ದು ಸಮುದ್ರದ ಅಲೆಗಳಂತೆ ಮೆಟ್ರೋ ಬ್ಯಾರಿಕೇಡ್ ಗೆ ಅಪ್ಪಳಿಸುತ್ತಿದೆ. ದ್ವಿಚಕ್ರ ವಾಹನ ಸವಾರರು, ಆಟೋ, ಕಾರಿನಲ್ಲಿ ಸಂಚರಿಸುವವರು ಇಂತಹ ಪರಿಸ್ಥಿತಿ ನಡುವೆ ಮುಂದೆ ಸಾಗಲು ಹರ ಸಾಹಸಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯ ರಾಜಧಾನಿಯ ಬಹುತೇಕ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮಳೆ ಇದೇ ರೀತಿ ಮುಂದುವರೆದರೆ ರಜೆ ಸಹ ಮುಂದುವರೆಸುವ ಸಾಧ್ಯತೆ ಇದೆ.
https://twitter.com/HNandan23/status/1566720126388699136?ref_src=twsrc%5Etfw%7Ctwcamp%5Etweetembed%7Ctwterm%5E1566720126388699136%7Ctwgr%5Ef757ba4919abcc68c92a746e8d94d68e079b03a7%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-fpressjr%2Fbangalorerainstrafficvisualshowingpeoplestrandedonwaterloggedroadsofcitygoesviral-newsid-n420114638%3Fs%3Dauu%3D0x61fbe37283098391ss%3Dwsp