ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೆಟ್ರೋ ಸಿಬ್ಬಂದಿಗಳ ದುರ್ವರ್ತನೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಮೆಟ್ರೋ ಹತ್ತಲು ಬಂದ ರೈತರೊಬ್ಬರನ್ನು ಅಪಮಾನಿಸಿದ್ದ ಮೆಟ್ರೋ ಸಿಬ್ಬಂದಿ ಇದೀಗ ಕಾರ್ಮಿಕರೊಬ್ಬರನ್ನು ಅವಮಾನಿಸಿರುವ ಘಟನೆ ನಡೆದಿದೆ.
ಯುವ ಕಾರ್ಮಿಕನ ಬಟ್ಟೆ ಸರಿಯಿಲ್ಲ ಎಂದು ತಡೆದು ನಿಲ್ಲಿಸಿದ ಮೆಟ್ರೋ ಸಿಬ್ಬಂದಿ, ಬೇರೆ ಬಟ್ಟೆ ಹಾಕಿಕೊಂಡು ಬರುವಂತೆ ಸೂಚಿಸಿದ್ದಾರೆ. ಕಾರ್ಮಿಕನ ಶರ್ಟ್ ಗುಂಡಿ ಬಿದ್ದುಹೋಗಿತ್ತು. ಇಷ್ಟಕ್ಕೇ ಆತನ ಬಟ್ಟೆ ಸರಿಯಿಲ್ಲ ಎಂದು ಅವಮಾನಿಸಿದ ಸಿಬ್ಬಂದಿ ಮೆಟ್ರೋ ರೈಲಿಗೆ ತೆರಳು ಅವಕಾಶ ನೀಡಿಲ್ಲ.
ಬೆಂಗಳೂರಿನ ದೊಡ್ಡಸಂದ್ರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೆಟ್ರೋ ಸಿಬ್ಬಂದಿಗಳ ವರ್ತನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರ ಸಾಮಾಜಿಕ ಜಾಲತಾಣಗಳ ಖಾತೆಗೆ ಟ್ಯಾಗ್ ಮಾಡಿರುವ ಕಾರ್ಮಿಕ ಯುವಕ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.