alex Certify BIG NEWS: ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರ ವಿಳಂಬ: ಕೆಲ ರೈಲುಗಳ ಸಂಖ್ಯೆ ಬದಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರ ವಿಳಂಬ: ಕೆಲ ರೈಲುಗಳ ಸಂಖ್ಯೆ ಬದಲು

ಬೆಂಗಳೂರು: ಬೆಂಗಳೂರು-ಮೈಸೂರು ನಡುವಿನ ರೆಲು ಕೆಲ ದಿನಗಳ ಕಾಲ ವಿಳಂಬವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಮತ್ತು ಕೆಂಗೇರಿ ನಡುವೆ ನಿರ್ವಹಣಾ ಕಾಮಗಾರಿಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ 90 ನಿಮಿಷ ತಡವಾಗಿ ಸಂಚರಿಸಲಿವೆ.

ಇನ್ನು ಹಲವು ವಿಶೇಷ ರೈಲುಗಳಿಗೆ ಜನವರಿ 1ರಿಂದ ನಿಯಮಿತ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಹೊಸ ರೈಲು ಸಂಖ್ಯೆಗಳನ್ನು SWR ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಎಸ್​ಎಂವಿಟಿ ಬೆಂಗಳೂರಿನಿಂದ ಹೊರಡುವ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಜರ್‌ ವಿಶೇಷ ರೈಲು (08270) ಡಿಸೆಂಬರ್​ 22, 24, 27, 29, 31 ಹಾಗೂ 2025 ಜನವರಿ 3 ಮತ್ತು 5 ರಂದು ನಿಗದಿತ ಸಮಯಕ್ಕಿಂತ 90 ನಿಮಿಷ ತಡವಾಗಿ ಹೊರಡಲಿದೆ. ಇದೇ ರೈಲು (06270) ಡಿಸೆಂಬರ್​ 26, ಮತ್ತು ಜನವರಿ 2 ರಂದು 30 ನಿಮಿಷ ತಡವಾಗಿ ಹೊರಡಲಿದೆ.

ಪ್ರಯಾಣಿಕರಲ್ಲಿನ ಗೊಂದಲ ನಿವಾರಿಸಲು ನೈಋತ್ಯ ರೈಲ್ವೆಯು 116 ವಿಶೇಷ ಪ್ರಯಾಣಿಕ ರೈಲುಗಳಿಗೆ 2025ರ ಜನವರಿ 1ರಿಂದ ನಿಯಮಿತ ರೈಲುಗಳ ಸಂಖ್ಯೆ ನೀಡುತ್ತಿದೆ. ಈವರೆಗೆ ವಿಶೇಷ ರೈಲುಗಳ ಸಂಖ್ಯೆ ‘0’ (ಸೊನ್ನೆ) ಸಂಖ್ಯೆಯಿಂದ ಪ್ರಾರಂಭವಾಗುತ್ತಿತ್ತು. ಇನ್ಮುಂದೆ ಈ ರೈಲುಗಳ ಸಂಖ್ಯೆ “5,6,7” ರಿಂದ ಆರಂಭವಾಗಲಿದೆ.

ಕೋವಿಡ್ ಸಂದರ್ಭದಲ್ಲಿ ಹಾಗೂ ಇನ್ನಿತರ ಕಾರಣಗಳಿಂದ ರದ್ದುಗೊಂಡು ಪುನಃ ವಿಶೇಷ ರೈಲುಗಳಾಗಿ ಇವು ಸಂಚಾರ ಮಾಡುತ್ತಿದ್ದವು. ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ವಿಶೇಷ ರೈಲುಗಳ ಟಿಕೆಟ್ ಶುಲ್ಕ ಹೆಚ್ಚು ಹಾಗೂ ಪದೇ ಪದೇ ಸಂಚಾರ ಅವಧಿ ವಿಸ್ತರಿಸಬೇಕಾದ ಕಾರಣ ಮುಂಗಡ ಬುಕ್ಕಿಂಗ್ ಕೂಡ ಸಮಸ್ಯೆ ಆಗುತ್ತದೆ. ಕಳೆದ ಲೋಕ ಸಭೆ ಚುನಾವಣೆ ವೇಳೆ ಸಂದರ್ಭದಲ್ಲಿ ಈ ರೈಲುಗಳನ್ನು ನೈಋತ್ಯ ರೈಲ್ವೆ ವಲಯವು ನಿಯಮಿತ ರೈಲುಗಳಾಗಿ ಪರಿವರ್ತಿಸಿ ಓಡಿಸುತ್ತಿದೆ. ಈಗಾಗಲೇ ಈ ರೈಲುಗಳ ದರ ಹಿಂದಿನಂತೆ ಕಡಿಮೆಗೊಂಡಿದೆ.

ಹೊಸ ನಿಯಮಿತ ರೈಲು ಸಂಖ್ಯೆಗಳನ್ನು ತಿಳಿಯಲು ಪ್ರಯಾಣಿಕರು https://swr.indianrailways.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...