ಬಹು ನಿರೀಕ್ಷಿತ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ನೆರವೇರಿಸಿದ್ದು, ಇದರ ಮಧ್ಯೆ ಬಿಡದಿ ಬೈಪಾಸ್ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಸಿಗುವ ಬಿಡದಿ ಬೈಪಾಸ್ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿದ್ದು, ಇದೀಗ ಒಂದು ಭಾಗದಲ್ಲಿ ವಾಹನಗಳು ಓಡಾಡದಂತೆ ಬ್ಯಾರಿಕೇಡ್ ಅಳವಡಿಸಿ ಇದರ ದುರಸ್ತಿ ಕಾರ್ಯ ನಡೆದಿದೆ.
ಈ ಹಿಂದೆ ಇದೆ ಜಾಗದಲ್ಲಿ ಲಾರಿ ಪಲ್ಟಿ ಆಗಿತ್ತು ಎನ್ನಲಾಗಿದ್ದು, ಜೊತೆಗೆ ವಾಹನಗಳು ಸ್ಕಿಡ್ ಆಗಿದ್ದವು ಎಂದು ತಿಳಿದುಬಂದಿದೆ. ಇದೀಗ ರಸ್ತೆ ಕಿತ್ತು ಬಂದಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹಲವರು, ಕಾಮಗಾರಿ ವೈಫಲ್ಯ ಎಂದು ಆರೋಪಿಸಿದ್ದಾರೆ.