ಬೆಂಗಳೂರು : ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ ಎಂದು ಉತ್ತರ ಭಾರತದ ಯುವತಿ ನಾಲಿಗೆ ಹರಿಬಿಟ್ಟಿದ್ದು, ವಿಡಿಯೋ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆಯಷ್ಟೇ ಓಲಾ ಆಟೋ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯರ ನಡುವೆ ವಾಗ್ವಾದ ನಡೆದಿತ್ತು. ನಂತರ ಆಟೋ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು.
ವಿಡಿಯೋದಲ್ಲಿ ಏನಿದೆ..?
ಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂಥವರಿಂದಲೇ ಬೆಂಗಳೂರು ಅಭಿವೃದ್ದಿಯಾಗುತ್ತಿದೆ. ನಾವೆಲ್ಲಾ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ ಎಂದು ಯುವತಿ ಹೇಳಿಕೆ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.