alex Certify ಫೆ.29 ರಿಂದ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’, ಟಿಕೆಟ್ ದರ ಎಷ್ಟು ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆ.29 ರಿಂದ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’, ಟಿಕೆಟ್ ದರ ಎಷ್ಟು ತಿಳಿಯಿರಿ

ಬೆಂಗಳೂರು : ಫೆಬ್ರವರಿ 29 ರಿಂದ ಮಾರ್ಚ್ 7ರವರೆಗೆ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ವೇಳೆ ಕನ್ನಡ ಸೇರಿದಂತೆ ವಿವಿಧ ವಿದೇಶಿ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ.

ಈ ಬಾರಿ ಸಾಮಾಜಿಕ ನ್ಯಾಯ, ಲಿಂಗತ್ವ ಸಮಾನತೆ, ಜೀವನ ಚರಿತ್ರೆ ವಿಷಯ ಸೇರಿದಂತೆ ಒಟ್ಟು 200ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಹಾಗೂ ಚಿತ್ರೋತ್ಸವದ ಕೋರ್ ಸಮಿತಿಯ ಅಧ್ಯಕ್ಷ ಡಾ.ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.

ಟಿಕೆಟ್ ದರ ಎಷ್ಟು..?

1) ಸಾರ್ವಜನಿಕರಿಗೆ  ₹ 800
2) ವಿದ್ಯಾರ್ಥಿಗಳು, ಚಿತ್ರೋದ್ಯಮದ ಸದಸ್ಯರು, ಹಿರಿಯ ನಾಗರಿಕರಿಗೆ ₹400

ಎಲ್ಲೆಲ್ಲಿ ಪ್ರದರ್ಶನ?

• ಒರಾಯನ್ ಮಾಲ್, ರಾಜಾಜಿನಗರ
•ರಾಜ್ ಕುಮಾರ್ ಕಲಾಭವನ, ಚಾಮರಾಜಪೇಟೆ
• ಸುಚಿತ್ರಾ ಫಿಲ್ಮಸೊಸೈಟಿ, ಬನಶಂಕರಿ 2ನೇ ಹಂತ

ಚಿತ್ರಗಳ ಹೆಚ್ಚಿನ ವಿವರಕ್ಕಾಗಿ ಮತ್ತು ಫೆಬ್ರವರಿ 15ರಿಂದ ಆನ್ ಲೈನ್ ಟಿಕೆಟ್ ಪಡೆದುಕೊಳ್ಳಲು ಸ್ಕ್ಯಾನ್ ಮಾಡಬಹುದಾಗಿದೆ.ಹೆಚ್ಚಿನ ಮಾಹಿತಿಗೆ: 080-23493410 ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...