alex Certify ಇಂದಿನಿಂದ ಒಂದು ವಾರ 15ನೇ ‘ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’: ಸಿಎಂ ಸಿದ್ದರಾಮಯ್ಯ ಉದ್ಘಾಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಒಂದು ವಾರ 15ನೇ ‘ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಬೆಂಗಳೂರು: ಇಂದಿನಿಂದ ಒಂದು ವಾರ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧ ಮುಂಭಾಗದಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ.

ಖ್ಯಾತ ನಟ ಜಬ್ಬಾರ್ ಪಟೇಲ್, ಬಾಂಗ್ಲಾ ನಟಿ ಅಜಮೇರಿ ಬಂದೋನ್, ಜೆಕ್ ವಿಮರ್ಶಕಿ ವಿಯಾರಾ ಲ್ಯಾಂಗರೋವಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಚಲನಚಿತ್ರವಾಗಿ ಪೀಟರ್ ಲೂಸಿ ನಿರ್ದೇಶನದ ಸ್ವಿಸ್ ಚಿತ್ರ ‘ಬೋಂಗೋರ್ ಸ್ವಿಜರ್ ಲೆಂಡ್’ ಪ್ರದರ್ಶಿಸಲಾಗುವುದು. ಮೂರು ಬಾರಿ ಗ್ರ್ಯಾಮ್ಮಿ ಪ್ರಶಸ್ತಿ ಪಡೆದ ರಿಕ್ಕಿ ಕೇಜ್ ಅವರಿಂದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಕನ್ನಡ, ಏಷಿಯನ್ ಸಿನಿಮಾ ಸ್ಪರ್ಧಾತ್ಮಕ ವಿಭಾಗ, ಸಮಕಾಲಿನ ವಿಶ್ವ ಸಿನಿಮಾ, ವಿಮರ್ಶಕರ ವಾರ, ಸಾಕ್ಷ್ಯ ಚಿತ್ರ ವಿಭಾಗ, ಜೀವನ ಚರಿತ್ರೆ, ಸಂಸ್ಮರಣೆ ಹಲವು ವಿಭಾಗಗಳಲ್ಲಿ ಸುಮಾರು 50ಕ್ಕೂ ಹೆಚ್ಚು ದೇಶಗಳ 200 ಚಿತ್ರಗಳು ಪ್ರದರ್ಶನ ಕಾಣಲಿವೆ.

ನಟ ಡಾಲಿ ಧನಂಜಯ ಚಿತ್ರೋತ್ಸವದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಒರಾಯನ್ ಮಾಲ್, ಸುಚಿತ್ರ ಸಿನಿಮಾ ಅಕಾಡೆಮಿ, ಕಲಾವಿದರ ಸಂಘಗಳ 14 ಸ್ಕ್ರೀನ್ ಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...