ಬೆಂಗಳೂರು: ದಾರಿಯಲ್ಲಿ ಹೋಗುತ್ತಿದ್ದಾಗ ಮಚ್ಚಾ ಎಂದು ಕರೆದಿದ್ದಕ್ಕೆ ವ್ಯಕ್ತಿಯನ್ನು ಹಿಡಿದು ಇಬ್ಬರು ಚಾಕುವಿನಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಕೀರ್ತಿ ಕುಮಾರ್ ಹಲ್ಲೆಗೊಳಗಾದ ಯುವಕ. ಸುನೀಲ್ ಹಾಗೂ ಗಣೇಶ್ ಹಲ್ಲೆ ಮಾಡಿದ ಯುವಕರು. ಮಧು, ಮಹೇಶ್ ಹಾಗೂ ಗ್ಯಾಂಗ್ ನಡುವೆ ಗಲಾಟೆಯಾಗಿತ್ತು. ಇಬ್ಬರು ಕೀರ್ತಿ ಕುಮಾರ್ ಸ್ನೇಹಿತರಾಗಿದ್ದು, ಗಲಾಟೆ ಬಿಡಿಸಲು ಭೀಮೇಶ್ ಎಂಬಾತನ ಬಳಿ ಕೀರ್ತಿಯನ್ನು ಕರೆದುಕೊಂಡು ಹೋಗಿದ್ದರು.
ಈ ವೇಳೆ ಸುನೀಲ್ ಎಂಬಾತ ಕುಡಿದು ಬೈಕ್ ನಲ್ಲಿ ಮನೆಯತ್ತ ಹೋಗುತ್ತಿದ್ದ. ಕೀರ್ತಿ ಹಾಗೂ ಇತರರನ್ನು ಕಂಡು ಬೈಕ್ ನಿಲ್ಲಿಸಿದ್ದಾನೆ. ಈ ವೇಳೆ ಯಾಕೆ ಬೈಕ್ ನಿಲ್ಲಿಸಿದೆ ಮಚ್ಚಾ ಎಂದು ಕೇಳುತ್ತಿದ್ದಂತೆ ಸುನೀಲ್, ನನ್ನನ್ನು ಮಚ್ಚಾ ಎಂದು ಕರೆಯುತ್ತೀಯಾ ಎಂದು ಆವಾಜ್ ಹಾಕಿ ಹೋಗಿದ್ದ. ಬಳಿಕ ಮನೆಗೆ ಹೋಗಿ ಭಾಮೈದನನ್ನು ಕರೆದುಕೊಂಡು ಬಂದು ಬಾಮೈದ ಹಾಗೂ ಸುನೀಲ್ ಇಬ್ಬರೂ ಸೇರಿ ಕೀರ್ತಿ ಕುಮಾರ್ ಗೆ ಚಾಕುವಿನಿಂದ ಇರಿದಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಸುನೀಲ್ ಹಾಗೂ ಗಣೇಶ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.