ಬೆಂಗಳೂರು : ಬೆಂಗಳೂರು ಕಂಪನಿಯ ಮಾನವರಹಿತ ಬಾಂಬರ್ ವಿಮಾನದ ಮೊದಲ ಹಾರಾಟ ಯಶಸ್ವಿಯಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪ್ರೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (ಎಫ್ಡಬ್ಲ್ಯುಡಿಎ) ಕಂಪನಿ ಅಭಿವೃದ್ಧಿಪಡಿಸಿರುವ ಸ್ವದೇಶಿ ನಿರ್ಮಿತ “ಎಫ್ಡಬ್ಲ್ಯುಡಿ200ಬಿ’ ಮಾನವರಹಿತ ಬಾಂಬರ್ ವಿಮಾನವು ತನ್ನ ಮೊದಲ ಪ್ರಾಯೋಗಿಕ ಯಶಸ್ವಿಯಾಗಿ ನಡೆಸಿದೆ.
ಶೀಘ್ರದಲ್ಲೇ ಮಾನವರಹಿತ ಬಾಂಬರ್ ವಿಮಾನವನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಕಂಪನಿಯ ಸಿಇಒ ಸುಹಾಸ್ ತೇಜಸ್ಕಂದ ತಿಳಿಸಿದ್ದಾರೆ. ಈ ವಿಮಾನವು ಮಧ್ಯಮ ಎತ್ತರದಲ್ಲಿ(15000 ಅಡಿ) ದೀರ್ಘಾವಧಿ ಹಾರಾಟ ನಡೆಸುತ್ತದೆ. ಬಾಂಬ್ ದಾಳಿಗೆ ಕ್ಷಿಪಣಿ ಯಂತಹಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದರು. 7 ತಾಸು ಆಗಸದಲ್ಲಿರುವ ಸಾಮರ್ಥ್ಯ ಇದಕ್ಕಿದೆ. ಇದಕ್ಕೆ 300 ಮೀ.ನ ರನ್ವೇ ಸಾಕು ಎಂದರು. ಹಾಗೂ 15000 ಅಡಿ ಎತ್ತರ ಹಾರ ಬಲ್ಲದು. ಗರಿಷ್ಠ 250 ಕಿ.ಮೀ ವೇಗದಲ್ಲಿ 800 ಕಿ.ಮೀ. ದೂ ಕ್ರಮಿಸಬಲ್ಲದು.