ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿ ಸಫಾರಿ ನಡೆಸಿದ ಬಳಿಕ ಬಂಡೀಪುರದ ಚಿತ್ರಣವೇ ಬದಲಾಗಿದೆ. ಸಾವಿರಾರು ಸಂಖ್ಯೆಗಳಲ್ಲಿ ಪ್ರವಾಸಿಗರು ಸಫಾರಿಗೆ ಹರಿದು ಬರುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ವಾಹನಗಳ ಕೊರತೆ ಎದುರಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿ ಕೇಂದ್ರದ ಚಿತ್ರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಸಫಾರಿಗಾಗಿ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಸಫಾರಿ ವಾಹನಗಳ ಕೊರತೆಯಿಂದ ಅದೆಷ್ಟೋ ಪ್ರವಾಸಿಗರು ನಿರಾಶರಾಗಿ ವಾಪಾಸ್ ಹೋಗುತ್ತಿರುವ ಘಟನೆಯೂ ನಡೆಯುತ್ತಿದೆ.
ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಸಫಾರಿ ವಾಹನ ಕೊರತೆಯಾಗಿ 20-30 ಹೊಸ ವಾಹನಗಳನ್ನು ಖರೀದಿಸಲಾಗಿದೆ. ಆದರೂ ಸಫಾರಿ ವಾಹನಗಳ ಸಂಖ್ಯೆ ಕೊರತೆಯಾಗಿದೆ. ಪ್ರವಾಸಿಗರು ನಿರಾಶರಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಫಾರಿ ವಾಹನಗಳಿಲ್ಲದೇ ಹಿಂದಿರುಗಬೇಕಾದ ಸ್ಥಿತಿ ಇದೆ ಎಂದು ವಾಗ್ವಾದ ನಡೆಸಿದ್ದಾರೆ.