ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಮೆರವಣಿಗೆ, ನೃತ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಲ್ಲದೆ ವರ – ವಧು ಕೂಡ ಡಾನ್ಸ್ ಮಾಡಿರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದರೆ ಹೊರದೇಶ ಅದರಲ್ಲೂ ಅಮೆರಿಕದ ನ್ಯೂಯಾರ್ಕ್ ಬೀದಿಯಲ್ಲಿ ಭಾರತೀಯ ಮೂಲದ ಗಂಡು – ಹೆಣ್ಣಿನ ಮೆರವಣಿಗೆ ನಡೆದಿದ್ದು, ಈ ಸಂದರ್ಭದಲ್ಲಿ ಹಿಂದಿ ಹಾಡುಗಳಿಗೆ ಇದರಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇದರ ವಿಡಿಯೋ ಈಗ ಫುಲ್ ವೈರಲ್ ಆಗಿದೆ.
ವರನ ಸಹೋದರ ಸೂರಜ್ ಪಟೇಲ್ ಎಂಬವರು ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಹೊರದೇಶದಲ್ಲಿ ಭಾರತದಲ್ಲಿದ್ದಂತೆ ಈ ಮದುವೆ ನಡೆದಿರುವುದು ನನಗೆ ಸಂತಸ ತಂದಿದೆ ಎಂದಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿ ಕಮೆಂಟ್ ಗಳ ಸುರಿಮಳೆ ಹರಿದು ಬಂದಿದೆ.