ವರ್ಣರಂಜಿತ ದೃಶ್ಯಗಳು, ಬ್ಯಾಂಡ್ ಮತ್ತು ಡೋಲ್ ನ ಸದ್ದು, ಶಹನಾಯಿಯಿಂದ ಹೊರಡುತ್ತಿರೊ ಸಂಗೀತ ಇದೆಲ್ಲಾ ನೋಡ್ತಿದ್ರೆ ಯಾವುದೋ ಮದುವೆ ಮೆರವಣಿಗೆ ಇರಬೇಕು ಅನ್ನಿಸೋದು ಸಹಜ.
ಆದರೆ ಇದು ಮದುವೆ ಮೆರವಣಿಗೆಯಲ್ಲ, ಚುನಾವಣೆಯಲ್ಲಿ ಗೆದ್ದ ವಿಜಯೋತ್ಸವದ ಮೆರವಣಿಗೆ. ಬುಧವಾರ, ಬಿಹಾರದ ಬೇಗುಸರಾಯ್ನಲ್ಲಿ ಹೊಸದಾಗಿ ಆಯ್ಕೆಯಾದ ಗ್ರಾಮದ ಮುಖಿಯಾ (ಮುಖಂಡ) ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಗ್ರಾಮ ಪಂಚಾಯತಿಯ ಮುಖ್ಯ ಕಚೇರಿಗೆ ಆಗಮಿಸಿದ ಪರಿ ಇದು. ಬ್ಯಾಂಡ್, ಡೊಳ್ಳುವಿನೊಂದಿಗೆ, ಬೆಂಬಲಿಗರ ಸಾಗರವೆ ಅವರ ಹಿಂದೆ ಆಗಮಿಸಿತ್ತು.
ಬೀಚ್ ನಲ್ಲಿ ಹೊಸ ವರ್ಷಾಚರಣೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಉತ್ತರ ಕನ್ನಡ ಕಡಲ ತೀರಗಳಲ್ಲಿ ಪ್ರವೇಶ ನಿಷೇಧ
ನವ್ಕೋತಿ ಗ್ರಾಮ ಪಂಚಾಯತ್ ರಾಜ್ಗೆ ಹೊಸದಾಗಿ ಚುನಾಯಿತರಾದ ಅಧ್ಯಕ್ಷ ಕುಮಾರ್ ಅವರು ಈ ಪ್ರದೇಶದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಹೊಸ ಮುಖಂಡನಾಗಿ ತಮ್ಮ ನೆಚ್ಚಿನ ನಾಯಕ ಆಯ್ಕೆಯಾಗಿರುವುದನ್ನ ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು. ಸಧ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬ್ಯಾಂಡ್ ಜನರು ತಮ್ಮ ತುತ್ತೂರಿಗಳಲ್ಲಿ ಬಾಲಿವುಡ್ ಹಾಡುಗಳನ್ನು ನುಡಿಸುವ ಜೊತೆಗೆ ಧೋಲ್ ಬೀಟ್ಗಳನ್ನು ಸಹ ನುಡಿಸುತ್ತಿದ್ದಾರೆ. ವಾದ್ಯಮೇಳದ ಜತೆಗೆ ಸ್ಥಳೀಯ ಮಕ್ಕಳು, ವೃದ್ಧರು ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
https://www.youtube.com/watch?v=eEK4tBO1CIs