ಕೋಲಾರ: ಯಾಲಕ್ಕಿ ಬಾಳೆ ಹಣ್ಣಿಗೆ ಸರಿಯಾದ ದರ ಸಿಗಲಿಲ್ಲ ಎಂದು ರೈತರೊಬ್ಬರು ಮೂರು ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಫಸಲನ್ನು ಸಂಪೂರ್ಣವಾಗಿ ಕಡಿದು ನಾಶ ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೋಟಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ಗಣೇಶ್ ಗೌಡ ಅವರು ತಮ್ಮ ಮೂರು ಎಕರೆಯಲ್ಲಿ ನಾಲ್ಕು 4.5 ಲಕ್ಷ ರೂಪಾಯಿ ಖರ್ಚು ಮಾಡಿ 2600 ಬಾಳೆ ಗಿಡ ಬೆಳೆದಿದ್ದರು. ಮೊದಲ ಫಸಲಿನ ಬಾಳೆಹಣ್ಣನ್ನು ಕೆಜಿಗೆ 30 ರಿಂದ 60 ರೂ.ಗೆ ಮಾರಾಟ ಮಾಡಿದ್ದರಿಂದ 1.50 ಲಕ್ಷ ರೂ. ಕೈಗೆ ಬಂದಿತ್ತು. ಎರಡನೇ ಬೆಳೆಯ ವೇಳೆಗೆ ಬಾಳೆಯ ದರ ಕೆಜಿಗೆ 10 ರೂ.ಗೆ ಕುಸಿದಿದೆ. ಬಾಳೆ ಮಂಡಿಯವರು ಕಡಿಮೆ ದರಕ್ಕೆ ಕೇಳಿದ್ದರಿಂದ 3 ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ಕಡಿದು ನೆಲಸಮ ಮಾಡಿದ್ದಾರೆ.