ಬಾಳೆಹಣ್ಣು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಅದರಿಂದ ಮುಖಕ್ಕೆ ಹತ್ತು ನಿಮಿಷಗಳ ಮಸಾಜ್ ಮಾಡಿ ನೋಡಿ. ಇದರಿಂದ ನಿಮ್ಮ ತ್ವಚೆ ಎಷ್ಟೊಂದು ಆಕರ್ಷಕವಾಗುತ್ತದೆ ಎಂಬುದು ನೀವೇ ಕಣ್ಣಾರೆ ನೋಡಿ.
ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುತ್ತಿವೆಯೇ….? ಬಾಳೆಹಣ್ಣಿನ ಸಿಪ್ಪೆಯಿಂದ ತ್ವಚೆಯನ್ನು ಉಜ್ಜಿ. ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ. ಇದರಿಂದ ಸುಕ್ಕು ಮಾಯವಾಗುತ್ತದೆ.
ಹಲ್ಲುಗಳು ಹಳದಿಗಟ್ಟಿದೆಯೇ….? ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ಹಲ್ಲುಗಳ ಮೇಲ್ಭಾಗವನ್ನು ತಿಕ್ಕಿ. ಒಂದೇ ವಾರದಲ್ಲಿ ನಿಮ್ಮ ಹಲ್ಲು ಬೆಳ್ಳಗಾಗುತ್ತದೆ.
ಸೊಳ್ಳೆ ಕಡಿತದ ಜಾಗಕ್ಕೆ ಇದರ ಸಿಪ್ಪೆಯಿಂದ ತಿಕ್ಕಿಕೊಂಡರೆ ತುರಿಕೆ ಬಹುಬೇಗ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾಗಲು ಇದನ್ನು ಆಹಾರದಲ್ಲಿ ಸೇವಿಸಬಹುದು. ಇದರಲ್ಲಿ ಹೇರಳವಾದ ನಾರಿನಂಶ ಇರುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರವಿಡಬಹುದು ಎಂಬುದನ್ನು ಸಂಶೋಧನೆಗಳೂ ದೃಢಪಡಿಸಿವೆ.