ಬಾಳೆಹಣ್ಣು ಎಲ್ಲರಿಗೂ ಇಷ್ಟ. ಬಾಳೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಕೂಡ ಸಾಕಷ್ಟು ಲಾಭವಿದೆ.
ಬಾಳೆ ಹಣ್ಣು ತಿಂದು ಸಿಪ್ಪೆ ಬಿಸಾಕುತ್ತೇವೆ. ಆದರೆ ಈ ಸಿಪ್ಪೆಯಿಂದ ನಮ್ಮ ಮುಖದಲ್ಲಿನ ಮೊಡವೆ ಹಾಗೂ ಸುಕ್ಕುಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.
ಬಾಳೆಹಣ್ಣಿನ ಸಿಪ್ಪೆಯಲ್ಲಿ ಫ್ಯಾಟಿ ಆ್ಯಸಿಡ್ ಜಾಸ್ತಿ ಇದೆ. ಬಾಳೆ ಹಣ್ಣಿನ ಸಿಪ್ಪೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಮುಖದಲ್ಲಿನ ಸುಕ್ಕು ಹಾಗೂ ಮೊಡವೆಗಳು ನಿವಾರಣೆಯಾಗುತ್ತದೆ. ಜತೆಗೆ ಕಾಂತಿಯುತವಾದ ತ್ವಚೆ ನಿಮ್ಮದಾಗುತ್ತದೆ.
ಮೊದಲಿಗೆ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಬಾಳೆ ಹಣ್ಣು ತೆಗೆದುಕೊಳ್ಳಿ. ಅದರ ಸಿಪ್ಪೆಯ ಒಳಭಾಗದಿಂದ ಮುಖಕ್ಕೆ ವರ್ತುಲಾಕಾರವಾಗಿ 10 ನಿಮಿಷ ಮಸಾಜ್ ಮಾಡಿಕೊಳ್ಳಿ. ಮುಖದಲ್ಲಿ ಮೊಡವೆ ಇದ್ದರೆ ತುಂಬಾ ನಿಧಾನವಾಗಿ ಮಸಾಜ್ ಮಾಡಿ. ಅದೇ ಕೂಡಲೇ ಮುಖವನ್ನು ತೊಳೆಯಬೇಡಿ. 4-5 ಗಂಟೆ ಇದು ಹಾಗೇಯೇ ನಿಮ್ಮ ಮುಖಕ್ಕೆ ರಾತ್ರಿ ಮಲಗುವ ಮೊದಲು ಇದನ್ನು ಮಾಡಿದರೆ ಒಳ್ಳೆಯದು ಬೆಳಿಗ್ಗೆಯೆದ್ದು ಮುಖ ತೊಳೆದರೆ ಸಾಕು. ಉತ್ತಮ ಫಲಿತಾಂಶಕ್ಕಾಗಿ ದಿನ ಮಾಡಿ.
ಒಡೆದ ಕಾಲಿನ ಹಿಮ್ಮಡಿಗೆ ಕೂಡ ಈ ಬಾಳೆ ಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿದರೆ ಕ್ರಮೇಣ ಒಡೆಯುವಿಕೆ ಕಡಿಮೆಯಾಗುತ್ತದೆ.