alex Certify ಸೌಂದರ್ಯ ಹೆಚ್ಚಿಸುತ್ತೆ ಬಾಳೆಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ಹೆಚ್ಚಿಸುತ್ತೆ ಬಾಳೆಹಣ್ಣು

ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಹೇಗೆ ಅಂತ ನೋಡಿ.

* ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಒಣ ಚರ್ಮವನ್ನು ಹೆಚ್ಚು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

* ಬಾಳೆಹಣ್ಣು ಅತ್ಯುತ್ತಮ ಎಕ್ಸಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಚರ್ಮದ ಮೇಲಿನ ಜಿಡ್ಡಿನಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ.

* ನೈಸರ್ಗಿಕವಾಗಿ ಸುಕ್ಕುಗಟ್ಟುವುದನ್ನು ತಡೆಯಬೇಕೆಂದರೆ ಬಾಳೆಹಣ್ಣಿನ ಸೇವನೆ ಹಾಗೂ ಚರ್ಮದ ಮೇಲೆ ಬಾಳೆಹಣ್ಣಿನ ಲೇಪನ ಹೊಂದುವುದು ಸೂಕ್ತ.

* ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣವಿದೆ. ಅದು ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ.

* ಬಾಳೆಹಣ್ಣಿನ ಸಿಪ್ಪೆಯಿಂದ ಮುಖದ ಮೇಲೆ ಮೃದುವಾದ ಮಸಾಜ್ ಮಾಡುವುದರಿಂದ ಮುಖದಲ್ಲಿ ಉಂಟಾಗುವ ಉರಿಯೂತ ನಿವಾರಿಸಬಹುದು.

* ಬಾಳೆಹಣ್ಣಿನ ಲೇಪನವನ್ನು ಆಗಾಗ ನೆತ್ತಿ ಹಾಗೂ ಕೂದಲ ಬುಡಕ್ಕೆ ಅನ್ವಯಿಸುವುದರಿಂದ ಕೇಶರಾಶಿಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.

* ಬಾಳೆಹಣ್ಣಿನಲ್ಲಿ ಸಿಲಿಕಾ ಅಂಶ ಹೆಚ್ಚಾಗಿರುತ್ತದೆ. ಕೂದಲು ಒಡೆಯುವುದು, ಬಣ್ಣ ಕಳೆದುಕೊಳ್ಳುವುದು ಹಾಗೂ ಉದುರುವ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ಬಾಳೆಹಣ್ಣು ಪೊಟ್ಯಾಸಿಯಂ, ವಿಟಮಿನ್, ಕ್ಯಾಲ್ಸಿಯಮ್, ಕಾರ್ಬೋಹೈಡ್ರೇಟ್ ಅಂಶ ಹಾಗೂ ನೈಸರ್ಗಿಕವಾಗಿ ಇರುವ ತೈಲ ಗುಣವು ಕೂದಲಿಗೆ ಪೋಷಣೆ ನೀಡುತ್ತವೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...