ಅತಿಯಾದ ಮೇಕಪ್, ಸೂರ್ಯ ಬಿಸಿಲು, ಮಾಲಿನ್ಯಗಳಿಂದ ಮುಖದ ಚರ್ಮ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಂದ ಚರ್ಮ ಡ್ರೈ ಆಗುತ್ತದೆ. ಹಾಗಾಗಿ ಬಾಳೆಹಣ್ಣನ್ನು ಬಳಸಿ ಚರ್ಮದ ಶುಷ್ಕತೆಯನ್ನು ತೆಗೆದುಹಾಕಬಹುದು.
ಕಿತ್ತಳೆ ಸಿಪ್ಪೆ ಪುಡಿ ಅಥವಾ ಕಡಲೆ ಹಿಟ್ಟಿನ ಪುಡಿ ಅಥವಾ ಶ್ರೀಗಂಧದ ಪುಡಿ 1 ಚಮಚ ತೆಗೆದುಕೊಂಡು ಅದಕ್ಕೆ ½ ಬಾಳೆ ಹಣ್ಣನ್ನು, ಜೇನುತುಪ್ಪ 1 ಚಮಚ, ನಿಂಬೆರಸ 2 ಚಮಚ . ಅರಶಿನ ಪುಡಿ ¼ ಚಮಚ, ಮೊಸರು 1 ½ ಚಮಚ ತೆಗೆದುಕೊಳ್ಳಿ.
ಬಾಳೆಹಣ್ಣು…, ಜೇನುತುಪ್ಪ, ನಿಂಬೆ ರಸ, ಅರಶಿನ ಪುಡಿ ಮತ್ತು ಮೊಸರನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿ. ಇದಕ್ಕೆ ಕಿತ್ತಳೆ ಸಿಪ್ಪೆ ಪುಡಿ ಅಥವಾ ಕಡಲೆ ಹಿಟ್ಟಿನ ಪುಡಿ ಅಥವಾ ಶ್ರೀಗಂಧದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 25 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಬಳಸಿದರೆ ನಿಮ್ಮ ಚರ್ಮದ ಸಮಸ್ಯೆ ದೂರವಾಗಿ ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.