ಮನೆಯಲ್ಲಿಯೇ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಣ್ಣು ಬಳಸುವುದು ಸುಲಭವಾದ ಮಾರ್ಗ. ಬಾಳೆ ಹಣ್ಣು ಕೂಡ ಸೌಂದರ್ಯವರ್ಧಕ. ತಿನ್ನಲು ಮಾತ್ರವಲ್ಲ ಬಾಳೆ ಹಣ್ಣಿನ ಮೂಲಕ ಫೇಶಿಯಲ್ ಕೂಡ ಮಾಡಬಹುದು.
ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ವಸ್ತು : ಮಾಗಿದ ಬಾಳೆಹಣ್ಣು – 1
ಜೇನುತುಪ್ಪ – 2 ಟೀ ಚಮಚ
ಅಲೋವೆರಾ ಜೆಲ್ – 1 ಟೀಸ್ಪೂನ್
ತೆಂಗಿನ ಎಣ್ಣೆ – 1 ಚಮಚ
ಮಾಡುವ ವಿಧಾನ : ಎಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿ ಅದನ್ನು ಬೇರೆ ಬಟ್ಟಲಿಗೆ ತೆಗೆಯಿರಿ. ಬೇಕಾದಲ್ಲಿ ಮೊಸರನ್ನು ಕೂಡ ಬಳಸಬಹುದು. ಕೈಗೆ ಪೇಸ್ಟ್ ತೆಗೆದುಕೊಂಡು ನಿಧಾನವಾಗಿ ಹಚ್ಚಿ. ನಂತ್ರ ನಿಮ್ಮ ಮುಖವನ್ನು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಸುಮಾರು 5 ರಿಂದ 7 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ ಅದನ್ನು 10 ನಿಮಿಷಗಳ ಹಾಗೆ ಬಿಡಿ. ನಂತ್ರ ಶುದ್ಧ ನೀರಿನಿಂದ ಮುಖ ತೊಳೆಯಿರಿ.