ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಬಾಳೆ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶವಿದೆ. ಆದ್ರೆ ಬಾಳೆ ಹಣ್ಣು ಸೇವನೆ ಮಾಡುವಾಗ ಕೆಲವೊಂದು ಎಚ್ಚರಿಕೆ ವಹಿಸಬೇಕು. ಎಲ್ಲ ಬಾಳೆ ಹಣ್ಣುಗಳು ಸೇವನೆಗೆ ಯೋಗ್ಯವಾಗಿರುವುದಿಲ್ಲ. ಕೆಲ ಬಾಳೆ ಹಣ್ಣುಗಳ ಸೇವನೆಯಿಂದ ಆರೋಗ್ಯ ವೃದ್ಧಿ ಬದಲು ಆರೋಗ್ಯ ಹಾಳಾಗುತ್ತದೆ.
ಅತಿ ಹೆಚ್ಚು ಹಣ್ಣಾಗಿರುವ ಬಾಳೆ ಹಣ್ಣನ್ನು ಸೇವನೆ ಮಾಡಬಾರದು. ಬಾಳೆ ಹಣ್ಣಿನ ಮೇಲೆ ಕಾಣಿಸಿಕೊಳ್ಳುವ ಕಲೆಗಳಿಂದಲೇ ಬಾಳೆ ಹಣ್ಣು, ಹೆಚ್ಚು ಹಣ್ಣಾಗಿದೆ ಎಂಬುದನ್ನು ಪತ್ತೆ ಮಾಡಬಹುದು. ಹೆಚ್ಚು ಹಣ್ಣಾಗಿರುವ ಬಾಳೆ ಹಣ್ಣಿನಲ್ಲಿ ಪೋಷಕಾಂಶದ ಪ್ರಮಾಣ ಕಡಿಮೆಯಿರುತ್ತದೆ. ಈ ಬಾಳೆ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ, ಶೇಕಡಾ 17.4ರಷ್ಟಿರುತ್ತದೆ. ಸಾಮಾನ್ಯ ಬಾಳೆ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಶೇಕಡಾ 14.4ರಷ್ಟಿರುತ್ತದೆ.
ಹೆಚ್ಚು ಹಣ್ಣಾಗಿರುವ ಬಾಳೆ ಹಣ್ಣಿನಲ್ಲಿ ಫೈಬರ್ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಇದ್ರಲ್ಲಿ 1.9 ಗ್ರಾಂ ಫೈಬರ್ ಇರುತ್ತದೆ. ಸಾಮಾನ್ಯ ಹಣ್ಣಿನಲ್ಲಿ 3.1 ಗ್ರಾಂ ಫೈಬರ್ ಇರುತ್ತದೆ. ಇದಲ್ಲದೆ ವಿಟಮಿನ್ ಎ, ಬಿ6, ವಿಟಮಿನ್ ಕೆ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಹಳದಿ ಬಣ್ಣದ ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇದು ತಿನ್ನಲು ಮಾತ್ರ ರುಚಿಯಾಗಿರುವುದಿಲ್ಲ, ಹೆಚ್ಚು ಪೋಷಕಾಂಶ ಇದ್ರಲ್ಲಿರುತ್ತದೆ.