alex Certify ಎಂಜಲು ಹಾಕಿ ಬಾಲ್ ತಿಕ್ಕಿದ ಪಾಕ್ ವೇಗಿಗೆ ಅಂಪೈರ್ ಖಡಕ್ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂಜಲು ಹಾಕಿ ಬಾಲ್ ತಿಕ್ಕಿದ ಪಾಕ್ ವೇಗಿಗೆ ಅಂಪೈರ್ ಖಡಕ್ ಎಚ್ಚರಿಕೆ

ಮೊದಲೇ ಕೊರೊನಾ ಸಾಂಕ್ರಾಮಿಕದ ಆತಂಕದ ಕಾಲ. ಈ ವೇಳೆ ಪಕ್ಕದ‌ ಮನೆಯವರು ಕೆಮ್ಮಿದರೂ, ಸೀನಿದರೂ ಗಾಬರಿ ಆಗುತ್ತದೆ. ಮಾಸ್ಕ್ ಧರಿಸದೆಯೇ ಯಾರಾದರೂ ರಸ್ತೆ ಮೇಲೆ ಕಂಡರೆ ಅವರಿಂದ ಮೈಲಿಗಟ್ಟಲೇ ಅಂತರ ಕಾಯ್ದುಕೊಳ್ಳಲು ಉಳಿದವರು ಮುಂದಾಗುತ್ತಿದ್ದಾರೆ.

ಅಷ್ಟರಮಟ್ಟಿಗೆ ಕೊರೊನಾ ಭೀತಿ ಜನಮಾನಸದಲ್ಲಿ ಆವರಿಸಿಬಿಟ್ಟಿದೆ. ಜಿಮ್‌ ಗಳಲ್ಲಿ ಒಬ್ಬರು ವ್ಯಾಯಾಮ ಮಾಡಿದ ಬಳಿಕ ತಾವೇ ಕೊಂಡೊಯ್ದ ಸ್ಯಾನಿಟೈಸರ್ ಸ್ಪ್ರೇಗಳನ್ನು ಸಾಧನಗಳ ಮೇಲೆ ಸಿಂಪಡಿಸಿ ನಂತರ ವ್ಯಾಯಾಮವನ್ನು ಶುರು ಮಾಡುತ್ತಿದ್ದೇವೆ. ವೈರಾಣು ಎಲ್ಲಿ ಅಡಗಿ ಕುಳಿತಿದೆಯೋ, ಯಾರಿಗೆ ಗೊತ್ತು ಹೇಳಿ?

ಇಂಥ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ವೇಗದ ಬೌಲರ್ ತನಗೆ ನೀಡಲಾದ ಬಾಲ್ ಮೇಲೆ ಉಗಿದು, ಚೆನ್ನಾಗಿ ನೆಕ್ಕಿದ್ದಾರೆ..! ಹಸನ್ ಅಲಿ ಎಂಬ ವೇಗಿಯು ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 8ನೇ ಓವರ್ ಎಸೆಯುತ್ತಿದ್ದಾಗ ಚೆಂಡನ್ನು ಪಳಪಳ ಹೊಳೆಯುವಂತೆ ಮಾಡುವ ಭರದಲ್ಲಿ ಎಂಜಲು ಹಾಕಿ ಚೆನ್ನಾಗಿ ಉಜ್ಜಿದ್ದಾರೆ.

ಸದ್ಯದ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮದಂತೆ, ಕೊರೊನಾ ಮುನ್ನೆಚ್ಚರಿಕೆಯನ್ನು ಎಲ್ಲ ಆಟಗಾರರು ಕಡ್ಡಾಯವಾಗಿ ಪಾಲಿಸಲೇಬೇಕು. ತಮ್ಮಿಂದ ಮತ್ತೊಬ್ಬ ಆಟಗಾರನಿಗೆ ಸೋಂಕು ಹರಡಬಹುದಂತಹ ಯಾವುದೇ ಕೆಲಸ ಮಾಡುವಂತಿಲ್ಲ. ಮುಖದ ಎದುರು ಸೀನುವುದು, ಅಪ್ಪಿಕೊಂಡು ಮುಖದ ಹತ್ತಿರ ಹೋಗುವುದು, ಬಾಲ್ ನೆಕ್ಕುವುದು, ಗ್ಲೌಸ್‌ಗಳನ್ನು ಬಾಯಿಂದ ಕಚ್ಚಿ ತೆಗೆದು ಪಕ್ಕದಲ್ಲಿ ನಿಂತವರಿಗೆ ಕೊಡುವುದು ಇತ್ಯಾದಿ. ವರ್ತನೆಗಳು ನಿಷಿದ್ಧ.

BIG NEWS: ಮರ್ಯಾದೆಗೇಡು ಹತ್ಯೆ ತಡೆಗೆ ಆದೇಶ, ಸ್ವಾತಂತ್ರ್ಯ ದೊರೆತು 75 ವರ್ಷವಾದ್ರೂ ಅಳಿಯದ ಜಾತಿಯತೆ ಬಗ್ಗೆ ‘ಸುಪ್ರೀಂ’ ಕಳವಳ

ಹಾಗಿದ್ದೂ ಕೂಡ ಹಸನ್ ಅಲಿ ದುರ್ವರ್ತನೆ ತೋರಿದ ಕೂಡಲೇ ಅಂಪೈರ್ ವೆರ್ನನ್ ಫಿಲಾಂದೆರ್ ಜಾಗೃತರಾಗಿದ್ದಾರೆ. ಹಸನ್‌ಗೆ ಹತ್ತಿರ ಕರೆದು, ಬಾಲ್ ನೆಕ್ಕದಂತೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇಂಥ ವರ್ತನೆ ಮುಂದುವರಿಸಿದ್ದು ಸ್ವಲ್ಪ ಕೂಡ ಗಮನಕ್ಕೆ ಬಂದರೆ, ಪಂದ್ಯದಿಂದ ನಿರ್ಬಂಧಿಸುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ತಲೆಬಾಗಿರುವ ಹಸನ್ ಅಲಿ, ತಮ್ಮ ವರ್ತನೆ ಸುಧಾರಿಸಿಕೊಳ್ಳುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...