alex Certify ಭೂ ಕುಸಿತ, ಭಾರೀ ಲಾರಿ ಸಂಚಾರಕ್ಕೆ ನಿಷೇಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂ ಕುಸಿತ, ಭಾರೀ ಲಾರಿ ಸಂಚಾರಕ್ಕೆ ನಿಷೇಧ

ಕೊಡಗಿನಲ್ಲಿ ವಿಪರೀತ ಮಳೆ ಬೀಳುತ್ತಿದ್ದು, ಗುಡ್ಡಗಳು ಕುಸಿಯುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್​ 15 ರವರೆಗೆ ಭಾರೀ ಸರಕು ಸಾಗಣೆ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲಾಡಳಿತ ನಿಷೇಧಿಸಿದೆ.

ಜಿಲ್ಲೆಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಹಾಳಾಗಿದ್ದು, ರಸ್ತೆಗಳು ಸಹ ಕುಸಿಯುವ ಭೀತಿ ಎದುರಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್​ ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮರ ಸಾಗಣೆಯನ್ನು ಸಂರ್ಪೂಣವಾಗಿ ನಿಷೇಧಿಸಲಾಗಿದೆ. ನಿಷೇಧವು ಸರಕು ಸಾಗಣೆದಾರರು ಮತ್ತು 16,200 ಕೆಜಿ ಮತ್ತು ಅದಕ್ಕಿಂತ ಹೆಚ್ಚಿನ ಒಟ್ಟು ವಾಹನ ತೂಕದ ಟ್ರಕ್​ಗಳು, ಬುಲೆಟ್​ ಟ್ಯಾಂಕರ್​ಗಳನ್ನು ಸಾಗಿಸುವ ಸರಕು ಕಂಟೈನರ್​ಗಳು ಮತ್ತು ಮಲ್ಟಿ ಆಕ್ಸಲ್​ ವಾಹನಗಳಿಗೆ ಅನ್ವಯಿಸುತ್ತದೆ.

ಎಲ್​ಪಿಜಿ, ಹಾಲು ಸಾಗಿಸುವ ಕಂಟೈನರ್​ಗಳು, ಸರ್ಕಾರಿ ಸೇವೆಯಲ್ಲಿನ ವಾಹನಗಳು, ಶಾಲಾ ಕಾಲೇಜು ವಾಹನಗಳು ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ.

ಆದೇಶದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಯ ಮೂಲಕ ಹಾದುಹೋಗುವ ಎನ್​ಎಚ್​ 275ರಲ್ಲಿ ಸಂಪಾಜೆ ಬಳಿ ಚೆಕ್​ಪೋಸ್ಟ್​ ಸ್ಥಾಪಿಸುವುದರ ಜೊತೆಗೆ 24 ಗಂಟೆಗಳ ಮೇಲ್ವಿಚಾರಣೆಗಾಗಿ ಗಸ್ತು ತಿರುಗಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...