
ಬಳ್ಳಾರಿ: 60 ಸಾವಿರಕ್ಕೆ ಮಾರಾಟವಾಗಿದ್ದ ಮಗುವನ್ನು ರಕ್ಷಿಸಿ ವಾಪಾಸ್ ಕರೆತರುವಲ್ಲಿ ಬಳ್ಳಾರಿ ಗ್ರಾಮಾಂತರ ಠಾಣೆ ಪೊಲಿಸರು ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಆಗಸ್ಟ್ 5, 2024ರಲ್ಲಿ ನವಜಾತ ಗಂಡು ಮಗು ಮಾರಾಟವಾಗಿದ್ದ ಬಗ್ಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದ. ಈ ಕರೆಯ ಜಾಡು ಹಿಡಿದ ಪೊಲೀಸರು ಇದೀಗ ಮಗುವನ್ನು ರಕ್ಷಿಸಿದ್ದಾರೆ. ಆಂಧ್ರಪ್ರದೇಶದ ಆಲೂರಿನಲ್ಲಿದ್ದ ಮಗುವನ್ನು ಪತ್ತೆ ಮಾಡಿ ಕರೆ ತಂದಿದ್ದು, ಮಗು ಖರೀದಿಸಿದ್ದ ನವೀನ್ ಕುಮಾರ್ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ.
2024ರ ಫೆಬ್ರವರಿಯಲ್ಲಿ ಮಹಿಳೆಯೊಬ್ಬರು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದೇ ಮಗುವನ್ನು 14ದಿನದಲ್ಲಿ 60 ಸಾವಿರಕ್ಕೆ ಮಹಿಳೆ ಮಾರಿದ್ದಳು. ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಾಯವಾಣಿಗೆ ಅನಾಮಧೇಯ ಕರೆ ಬಂದಿತ್ತು. ಈ ಕರೆ ಆಧರಿಸಿ ಪರಿಸೀಲಿಸಿದಾಗ ಮಗು ಮಾರಾಟವಾಗಿದ್ದು ಖಚಿತವಾಗಿತ್ತು. ಸದ್ಯ ಮಗುವನ್ನು ರಕ್ಷಿಸಿ ಕರೆತರಲಾಗಿದೆ.