alex Certify ಬಳ್ಳಾರಿ ಬ್ಯಾಂಕ್ ನಿಂದ 2 ಕೋಟಿಗೂ ಅಧಿಕ ಹಣ ದೋಚಿದ ಸೈಬರ್ ವಂಚಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳ್ಳಾರಿ ಬ್ಯಾಂಕ್ ನಿಂದ 2 ಕೋಟಿಗೂ ಅಧಿಕ ಹಣ ದೋಚಿದ ಸೈಬರ್ ವಂಚಕರು

ವಿಜಯನಗರ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್ ನ ಕೆಲವು ಶಾಖೆಗಳಿಂದ ಸೈಬರ್ ವಂಚಕರು 2.3 ಕೋಟಿ ಹನ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಗ್ರಾಹಕರು ತಮ್ಮ ಖಾತೆಗೆ ಹಣ ಜಮೆ ಆಗುತ್ತಿಲ್ಲ ಎಂದು ದೂರು ನೀಡಿದ ಬಳಿಕ ಪರಿಶೀಲನೆ ನಡೆಸಿದಾಗ ಸೈಬರ್ ವಂಚಕರು ಹಣ ದೋಚಿರುವ ಘಟನೆ ಬಯಲಾಗಿದೆ.

ವಂಚಕರು ಬ್ಯಾಂಕ್ ನ ಆರ್ ಟಿ ಜಿಎಸ್/ನೆಫ್ಟ್ ವಹಿವಾಟು ವ್ಯವಸ್ಥೆಯನ್ನು ಟಾರ್ಗೆಟ್ ಮಾಡಿಕೊಂಡು ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಬಿಡಿಸಿಸಿ ಬ್ಯಾಂಕ್ ನಿಂದ ಐಡಿಬಿಐ ಬ್ಯಾಂಕ್ ಗೆ ವಡಿಕೆಯಂತೆ ಹಣ ವರ್ಗಾವಣೆಯ ಸಮಯದಲ್ಲಿ 2025ರ ಜನವರಿ 10ರಂದು ಹ್ಯಾಕರ್ ಗಳು ಎಕ್ಸ್ ಎಂಎಲ್ ಫೈಲ್ ಗಳಲ್ಲಿನ ಖಾತೆ ಸಂಖ್ಯೆಗಳುಹಾಗೂ ಐಎಫ್ ಎಸ್ ಸಿ ಕೋಡ್ ಗಳನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಫಲಾನುಭವಿಗಳ ಖಾತೆಗಳಿಗೆ ಹಣ ಹೋಗದೇ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿನ 25 ಬೇರೆ ಬೇರೆ ಖಾತೆಗಳಿಗೆ ಹಣ ಜಮೆಯಾಗಿದೆ. ಜ.10ರಿಂದ ಆನ್ ಲೈನ್ ಹಣ ವರ್ಗಾವಣೆ ಉದ್ದೇಶಿತ ಗ್ರಾಹಕರ ಖಾತೆಗಳಿಗೆ ಜಮೆಯಾಗಿಲ್ಲ. ಆನ್ ಲೈನ್ ಮೂಲಕ ಸೈಬರ್ ವಂಚಕರು ದರೋಡೆ ನಡೆಸಿರುವುದು ಖಚಿತವಾಗಿದೆ. ಘಟನೆ ಬಳಿಕ ಬ್ಯಾಂಕ್ ತನ್ನ ಆರ್ ಟಿ ಜಿಎಸ್ ಸೇವೆಸ್ಥಗಿತಗೊಳಿಸಿದ್ದು, ಹೊಸಪೇಟೆ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಸದ್ಯ ಪ್ರಕರಣ ಬಳ್ಳಾರಿ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...