ಬಳ್ಳಾರಿ: ದೇವರು ಹೇಳಿರುವುದಾಗಿ ನಂಬಿಸಿ ಬಾಲಕಿಗೆ ಚರ್ಚ್ ಫಾದರ್ ತಾಳಿಕಟ್ಟಿದ ಘಟನೆ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ನಡೆದಿದೆ.
ತಾಯಿಯೊಂದಿಗೆ ಬಾಲಕಿ ದಿನವೂ ಪ್ರಾರ್ಥನೆ ಸಲ್ಲಿಸಲು ಚರ್ಚೆ ಹೋಗುತ್ತಿದ್ದಳು. ಮೇ 14 ರಂದು ಚರ್ಚ್ ನ 33 ವರ್ಷದ ಫಾದರ್ ತಾಯಿ ಎದುರಲ್ಲೇ ದಿಢೀರನೆ ಬಾಲಕಿಗೆ ತಾಳಿ ಕಟ್ಟಿದ್ದಾನೆ. ದೇವರು ಹೇಳಿದ್ದರಿಂದ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ.
ಘಟನೆಯಿಂದ ವಿಚಲಿತಗೊಂಡ ಬಾಲಕಿಯ ತಾಯಿ ಸ್ವಗ್ರಾಮ ಬಲಕುಂದಿಗೆ ತೆರಳಿ ಕುಟುಂಬ ಸದಸ್ಯರು ಮತ್ತು ಹಿರಿಯರಿಗೆ ಮಾಹಿತಿ ನೀಡಿದ್ದು, ಚರ್ಚ್ ಫಾದರ್ ವಿರುದ್ಧ ತೆಕ್ಕಲಕೋಟೆ ದೂರು ನೀಡಲಾಗಿದೆ. ಪ್ರಕರಣವನ್ನು ಸಿರಿಗೇರಿ ಠಾಣೆಗೆ ವರ್ಗಾಯಿಸಲಾಗಿದ್ದು, ದೂರು ದಾಖಲಾದ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆನ್ನಲಾಗಿದೆ.