ಬಳ್ಳಾರಿ: ಅಪಹರಣಕ್ಕೊಳಗಾಗಿದ್ದ ಬಳ್ಳಾರಿ ವೈದ್ಯ ಡಾ. ಸುನಿಲ್ ಪತ್ತೆ ಹಚ್ಚುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಸಮೀಪ ಜಮೀನೊಂದರಲ್ಲಿ ಅಪಹರಣಕಾರರು ಸುನಿಲ್ ಅವರನ್ನು ಬಿಟ್ಟು ಹೋಗಿದ್ದಾರೆ. ಅಪಹರಣಕಾರರು ಸುನಿಲ್ ಅವರನ್ನು ಅಪಹರಿಸಿದ ನಂತರ ಊರೂರು ಸುತ್ತಾಡಿಸಿದ್ದಾರೆ. ಕೊನೆಗೆ ಪೊಲೀಸರ ಬಯಕ್ಕೆ ವೈದ್ಯನನ್ನು ಆರೋಪಿಗಳು ಬಿಟ್ಟು ಹೋಗಿದ್ದಾರೆ.
ನಿನ್ನೆ ಬೆಳಿಗ್ಗೆ 5.30ಕ್ಕೆ ವಾಕಿಂಗ್ ಮಾಡುವಾಗ ಅವರನ್ನು ಅಪಹರಿಸಲಾಗಿತ್ತು. ಮೂರು ಕೋಟಿ ರೂಪಾಯಿ ನಗದು, ಮೂರು ಕೋಟಿ ರೂಪಾಯಿ ಮೌಲ್ಯದ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು. ಸುನಿಲ್ ಅವರ ಮೊಬೈಲ್ ನಿಂದಲೇ ಕರೆ ಮಾಡಿ ಮಾತನಾಡಿದ್ದರು. ಅವರ ಮೇಲೆ ಹಲ್ಲೆ ಮಾಡಿ ಅಪಹರಣಕಾರರು ಬಿಟ್ಟು ಹೋಗಿದ್ದಾರೆ.
ಇಂಡಿಕಾ ಕಾರ್ ನಲ್ಲಿ ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿ ಅವರನ್ನು ಅಪಹರಿಸಲಾಗಿತ್ತು. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿತ್ತು.