ಕೇಶ ವ್ಯವಸ್ಥೆ ಚಿಕಿತ್ಸೆ ಪಡೆದ ವ್ಯಕ್ತಿಯೊಬ್ಬರು ತಮ್ಮ ಬೊಕ್ಕತಲೆಗೆ ಪರಿಹಾರ ಕಂಡುಕೊಂಡು ಹತ್ತು ವರ್ಷದಷ್ಟು ಕಡಿಮೆ ವಯಸ್ಸಿನವರಂತೆ ಕಾಣುತ್ತಿದ್ದಾರೆ.
ನೋವೋ ಕಬೆಲೋ ಹೇರ್ ಹೆಸರಿನ ನೆಟ್ಟಿಗರೊಬ್ಬರು ಶೇರ್ ಮಾಡಿದ ವಿಡಿಯೋದಲ್ಲಿ, ಗ್ರಹಂ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಬೋಳುತಲೆಯ ಡಲ್ ಲುಕ್‌ಗೆ ಏನಾದರೂ ಪರಿಹಾರ ಕಂಡುಕೊಳ್ಳುವ ಆಲೋಚನೆ ಮಾಡಿದ್ದಾರೆ. 360 ಡಿಗ್ರಿಯಲ್ಲಿ ಸುತ್ತುವ ಕ್ಯಾಮೆರಾ ಗ್ರಹಾಂನ ಬೋಳು ತಲೆಯನ್ನು ತೋರುತ್ತದೆ.
“ಇವರು ಗ್ರಹಾಂ. ಇವರಿಗೆ 39 ವರ್ಷ ವಯಸ್ಸಾಗಿದ್ದು, ಕೇಶ ವ್ಯವಸ್ಥೆ ಮೂಲಕ 10 ವರ್ಷಗಳಷ್ಟು ಕಡಿಮೆಯವರಂತೆ ಕಾಣಬಹುದೇ ಎಂದು ನೋಡುತ್ತಿದ್ದಾರೆ,” ಎಂದು ಕ್ಯಾಪ್ಷನ್ ನೀಡಲಾದ ವಿಡಿಯೋದಲ್ಲಿ ಆತನ ಕೇಶದ ಸಮಸ್ಯೆಗೆ ಎಂಥ ಪರಿಹಾರ ಕೊಡಲಾಗಿದೆ ಎಂಬುದನ್ನು ನೀವು ನೋಡಬಹುದು.
ಪಿಜಿ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಾವಕಾಶ, ಸಿಹಿ ಸುದ್ದಿ ನೀಡಿದ ಸಚಿವ ಈಶ್ವರಪ್ಪ
ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನ ರುಮಾ ಹೇರ್ ಸಲೋನ್‌ನಲ್ಲಿ ಈ ಚಿಕಿತ್ಸೆ ನೀಡಲಾಗಿದೆ.
ವಿಗ್ ಮತ್ತು ಕೂದಲು ಕಸಿಗಳನ ಸಮ್ಮಿಲನವಾದ ಕೇಶ ವ್ಯವಸ್ಥೆಯಲ್ಲಿ, ನಿಜವಾದ ಕೂದಲಿನಿಂದ ವಿಗ್ ತಯಾರಿಸಿ, ಗ್ರಾಹಕರ ಅಗತ್ಯತೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗುತ್ತದೆ. ಈ ’ವ್ಯವಸ್ಥೆ’ಯನ್ನು ಬಳಿಕ ಅಂಟು ಮತ್ತು ಲೋಷನ್‌ಗಳ ನೆರವಿನಿಂದ ಚರ್ಮಕ್ಕೆ ಹಾನಿಯಾಗದಂತೆ ತಲೆಗೆ ಅಂಟಿಸಲಾಗುತ್ತದೆ.
https://youtu.be/hL7ZzUiZqU0