alex Certify ಚಿನ್ನ, ಬೆಳ್ಳಿ, ವಜ್ರಾಲಂಕಾರದಿಂದ ಕಂಗೊಳಿಸುತ್ತಿದ್ದಾನೆ ಬಾಲರಾಮ, ಇವುಗಳ ವಿನ್ಯಾಸದ ಹಿಂದಿದೆ ಕಠಿಣ ಪರಿಶ್ರಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನ, ಬೆಳ್ಳಿ, ವಜ್ರಾಲಂಕಾರದಿಂದ ಕಂಗೊಳಿಸುತ್ತಿದ್ದಾನೆ ಬಾಲರಾಮ, ಇವುಗಳ ವಿನ್ಯಾಸದ ಹಿಂದಿದೆ ಕಠಿಣ ಪರಿಶ್ರಮ…!

ಅಯೋಧ್ಯೆಯಲ್ಲಿ ವಿರಾಜಮಾನನಾಗಿರೋ ಬಾಲರಾಮ ಎಲ್ಲರ ಕಣ್ಸೆಳೆಯುತ್ತಿದ್ದಾನೆ. ಮಂದಸ್ಮಿತನಾದ ಶ್ರೀರಾಮನ ಆಕರ್ಷಕ ರೂಪ, ಅದ್ಭುತ ವಿನ್ಯಾಸದ ಆಭರಣ, ಆಭೂಷಣಗಳಂತೂ ಇಡೀ ಜಗತ್ತನ್ನೇ ಬೆರಗುಗೊಳಿಸಿವೆ. ರಾಮಲಲ್ಲಾನ ಅಲಂಕಾರಕ್ಕೆ ಚಿನ್ನ, ಬೆಳ್ಳಿ, ವಜ್ರಗಳು ಮತ್ತು ರತ್ನಗಳನ್ನು ಬಳಸಲಾಗಿದೆ. ರಾಮನ ಆಭರಣಗಳು ಮತ್ತು ಬಟ್ಟೆಗಳನ್ನು ಲಕ್ನೋದ ಆಭರಣ ವ್ಯಾಪಾರಿ ಮತ್ತು ದೆಹಲಿಯ ಡಿಸೈನರ್ ತಯಾರಿಸಿದ್ದಾರೆ.

ಬಟ್ಟೆ ಮತ್ತು ಆಭರಣಗಳನ್ನು ಸಿದ್ಧಪಡಿಸಲು ಧಾರ್ಮಿಕ ಗ್ರಂಥಗಳ ಬಳಕೆ

ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು 5 ವರ್ಷದ ಮಗುವಿನ ರೂಪದಲ್ಲಿ  ಸ್ಥಾಪಿಸಲಾಗಿದೆ. ರಾಮನ ಉಡುಪುಗಳು ಮತ್ತು ಆಭರಣಗಳು ಅವರ ದೈವಿಕ ರೂಪಕ್ಕೆ ಹೆಚ್ಚಿನ ಹೊಳಪನ್ನು ತಂದಿವೆ. ಸಾಕಷ್ಟು ಸಂಶೋಧನೆಗಳ ಬಳಿಕ ಇವುಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಅಧ್ಯಾತ್ಮ ರಾಮಾಯಣ, ವಾಲ್ಮೀಕಿ ರಾಮಾಯಣ, ರಾಮಚರಿತಮಾನಸಗಳು ಮತ್ತು ಆಳವಂದರ ಸ್ತೋತ್ರದಲ್ಲಿ ವಿವರಿಸಲಾದ ಶ್ರೀರಾಮನ ರೂಪದ ವಿವರಣೆಯನ್ನು ಸಹ ಅಧ್ಯಯನ ಮಾಡಲಾಗಿದೆ. ಅಯೋಧ್ಯೆಯ ಕವಿ ಯತೀಂದ್ರ ಮಿಶ್ರಾ ಅವರ ವಿವರಣೆಯ ಆಧಾರದ ಮೇಲೆ ಆಭರಣಗಳನ್ನು ಸಿದ್ಧಪಡಿಸಲಾಗಿದೆ.

ಬನಾರಸಿಯ ಬಟ್ಟೆಗಳಲ್ಲಿ ಬಳಸುವ ಚಿನ್ನದ ಝರಿ

ರಾಮಲಲ್ಲಾಗೆ ತೊಡಿಸಲು ಬನಾರಸಿ ಬಟ್ಟೆಗಳನ್ನು ಬಳಸಲಾಗಿದೆ. ಹಳದಿ ಧೋತಿ ಮತ್ತು ಅಂಗವಸ್ತ್ರವನ್ನು ವಿನ್ಯಾಸ ಮಾಡಲಾಯ್ತು. ಈ ಅಂಗವಸ್ತ್ರಗಳ ಮೇಲೆ ಚಿನ್ನದ ಕುಸುರಿ ಕೆಲಸವಿದೆ. ಅದರ ಮೇಲೆ ಶಂಖ, ಪದ್ಮ, ಚಕ್ರ ಮತ್ತು ನವಿಲಿನ ಚಿತ್ರಗಳಿವೆ. ಇದನ್ನು ದೆಹಲಿ ಡಿಸೈನರ್‌ ಮನೀಶ್ ತ್ರಿಪಾಠಿ ವಿನ್ಯಾಸಗೊಳಿಸಿದ್ದಾರೆ.

ಭಗವಂತನ ಕಿರೀಟವನ್ನು ಚಿನ್ನದಿಂದ ಮಾಡಲಾಗಿದೆ. ಅದರಲ್ಲಿ ಮಾಣಿಕ್ಯ, ಪಚ್ಚೆ, ಮುತ್ತುಗಳನ್ನು ಅಳವಡಿಸಲಾಗಿದೆ. ಅವರ ಕಿವಿಯೋಲೆಗಳಲ್ಲಿ ಚಿನ್ನ, ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳನ್ನು ಕೂಡ ಹಾಕಲಾಗಿದೆ. ಕೊರಳಲ್ಲಿ ಕೂಡ ವಜ್ರಾಭರಣಗಳು ಹೊಳೆಯುತ್ತಿವೆ. ರಾಮಲಲ್ಲಾ ಅವರ ಕೌಸ್ತುಭ್ ಮಣಿಯನ್ನು ದೊಡ್ಡ ಮಾಣಿಕ್ಯ ಮತ್ತು ವಜ್ರದಿಂದ ತಯಾರಿಸಲಾಗಿದೆ.

ಶ್ರೀರಾಮರಿಗೆ ತೊಡಿಸಿರುವ ಪಾದುಕೆಗಳಲ್ಲೂ ವಜ್ರ ಮತ್ತು ಪಚ್ಚೆಯ ಅಲಂಕಾರವಿದೆ. ಇದು ಚಿನ್ನದಿಂದ ಮಾಡಲ್ಪಟ್ಟಿದೆ. ಇದರೊಂದಿಗೆ ರಾಮಲಲ್ಲಾರ ನಡುಪಟ್ಟಿ, ತೋಳಬಂಧಿ, ಬಳೆಗಳು, ಉಂಗುರ, ಪಜನಿಯ, ಬಾಣ, ತಿಲಕ, ಆಟಿಕೆಗಳು, ಬೆಳ್ಳಿಯಿಂದ ಮಾಡಿದ ಕೊಡೆ ಇವೆಲ್ಲವೂ ಬಹಳ ಆಕರ್ಷಕವಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...