ಬೆಂಗಳೂರು: ಬೆಂಗಳೂರಿನ ಬೇಕರಿ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ. 12 ಸ್ಯಾಂಪಲ್ ಕೇಕ್ ಗಳು ಅನ್ ಸೇಫ್ ಎಂದು ಪರೀಕ್ಷೆಗಳಲ್ಲಿ ದೃಢಪಟ್ಟಿವೆ.
ಈ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿರುವುದು ಕೇಕ್ ಟೆಸ್ಟಿಂಗ್ ರಿಪೋರ್ಟ್ ನಲ್ಲಿ ಪತ್ತೆಯಾಗಿದೆ. ರೆಡ್ ವೆಲ್ ವೆಟ್, ಬ್ಲಾಕ್ ಫಾರೆಸ್ಟ್ ಕೇಕ್ ಗಳಲ್ಲಿ ಅತಿಹೆಚ್ಚು ಬಣ್ಣ ಬಳಕೆ ಮಾಡಲಾಗುತ್ತದೆ. ಈ ಬಣ್ಣಗಳಲ್ಲಿ ಅಪಾಯಕಾರಿ ಅಂಶಗಳು ಇವೆ ಎಂಬುದು ಬಹಿರಂಗವಾಗಿದೆ.
ರೆಡ್ ವೆಲ್ ವೆಟ್, ಬ್ಲಾಕ್ ಫಾರೆಸ್ಟ್ ಕೇಕ್ ಗಳಲ್ಲಿ ಹೆಚ್ಚು ಬಣ್ಣ ಬಳಕೆ ಮಾಡಲಾಗುತ್ತದೆ. 12 ಮಾದರಿಗಳಲ್ಲಿ ಅಲೂನಾ ರೆಡ್, ಸನ್ ಸೆಟ್ ಯೆಲ್ಲೋ, ಪೊನುಸೆಯಾ 4R, ಕಾರ್ಮಿಯೊಸೆನ್ ಎಂಬ ಅಂಶಗಳು ಪತ್ತೆಯಾಗಿವೆ. ಕೃತಕ ಬಣ್ಣಗಳಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ರೆಡ್ ವೆಲ್ ವೆಟ್, ಬ್ಲಾಕ್ ಫಾರೆಸ್ಟ್ ಕೇಕ್ ಗಳಿಗೆ ಬಣ್ಣ ಬಳಕೆಗೆ ನಿರ್ಬಂಧ ಹೇರಲಾಗಿದೆ.
ಕೇಕ್ ತಯಾರಿಸುವ ವೇಳೆ ಆಹಾರ ಸುರಕ್ಷತಾ ಇಲಾಖೆಯ ಸೂಚನೆ ಪಾಲಿಸುವಂತೆ ಕೇಕ್ ತಯಾರಕರಿಗೆ ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.