ಬೆಂಗಳೂರು: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾದಳ ವಿಶೇಷ ನ್ಯಾಯಾಲಯ NIA ಪೊಲೀಸ್ ಕಸ್ಟಡಿಗೆ ವಹಿಸಿದೆ.
ಶಿವಮೊಗ್ಗದ ಅಬ್ದುಲ್ ಆಫ್ನಾನ್, ಅಬ್ದುಲ್ ಖಾದರ್ ಜಿಲಾನ್, ಫರಜ್ ಪಾಷಾ, ಸೈಯದ್ ನದೀಮ್, ಜಾಫರ್ ಸಾದಿಕ್ ಅವರನ್ನು ಮೇ 5 ರ ಬೆಳಿಗ್ಗೆಯಿಂದ ಮೇ 9 ರ ಮಧ್ಯಾಹ್ನದವರೆಗೆ ಎನ್.ಐ.ಎ. ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ.
ಎನ್.ಐ.ಎ. ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಎನ್.ಐ.ಎ. ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶ ಬಿ.ಜಿ. ಪ್ರಮೋದ್ ಅವರು ಆರೋಪಿಗಳನ್ನು ಎನ್.ಐ.ಎ. ಕಸ್ಟಡಿಗೆ ವಹಿಸಿದ್ದಾರೆ. ಫೆಬ್ರವರಿ 20 ರಂದು ರಾತ್ರಿ 9 ಗಂಟೆ ಸುಮಾರಿಗೆ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಲಾಗಿದೆ.