ದೇಶೀಯ ದ್ವಿಚಕ್ರ ವಾಹನ ದೈತ್ಯ ಬಜಾಜ್ ಮೋಟಾರ್‌ಸೈಕಲ್ಸ್ ಯುಕೆ ಮೂಲದ ಪ್ರೀಮಿಯಂ ಮೋಟಾರ್ ಸೈಕಲ್ ಕಂಪನಿ ಟ್ರಯಂಫ್ ಜೊತೆ ಕೈಜೋಡಿಸಿರುವುದು ಹೊಸ ವಿಚಾರವಲ್ಲ. ಆದರೆ ಈ ಬಜಾಜ್-ಟ್ರಯಂಪ್ ಜೋಡಿಯ ಹೆಸರಿಡದ ಎರಡು ಮೋಟಾರ್ ಸೈಕಲ್ಗಳು ಭಾರತದ ರಸ್ತೆಗಳಲ್ಲಿ ಟೆಸ್ಟ್ ರೈಡ್ ಮಾಡುತ್ತಿವೆ ಎನ್ನುವುದು ಹೊಸ ಸುದ್ದಿ. ಈ ಮೂಲಕ ಭಾರತೀಯ ಮಾರುಕಟ್ಟೆಗೆ ಬಜಾಜ್-ಟ್ರಯಂಪ್ ವಾಹನಗಳು ಆದಷ್ಟು ಬೇಗ ಎಂಟ್ರಿ ಕೊಡಲಿವೆ ಎಂಬ ಸುಳಿವು ದೊರೆತಿದೆ.
ಸಧ್ಯ ಲೀಕ್ ಆಗಿರುವ ಪಿಕ್ಚರ್ ಗಳನ್ನ ನೋಡುತ್ತಿದ್ರೆ, ಈ ಎರಡು ಬೈಕ್‌ಗಳು ಸಾಮಾನ್ಯವಾಗಿ ಟ್ರಯಂಫ್ನ ಕ್ರೀಡಾ ವಿನ್ಯಾಸ ಮತ್ತು ಸ್ಟೈಲಿಂಗ್ ಸೂಚನೆಗಳನ್ನು ನೀಡುತ್ತವೆ. ದುಂಡಾದ ಇಂಧನ-ಟ್ಯಾಂಕ್, LED ಹೆಡ್‌ಲ್ಯಾಂಪ್, ಇತ್ಯಾದಿಗಳು ನೋಡುಗರಿಗೆ ಮೂಲ ಟ್ರಯಂಫ್ ಬೈಕ್‌ಗಳ ಫೀಲ್ ಅಂಡ್ ಲುಕ್ ನೆನಪಿಸುತ್ತವೆ.
BIG NEWS: ಎಲೆಕ್ಟ್ರಿಕ್ ಬೈಕ್ ಗಳ 1000 ಚಾರ್ಜಿಂಗ್ ಸೌಲಭ್ಯ ಸ್ಥಾಪನೆ; ಎಥರ್-ಎಸ್ಕಾಂ ನಡುವೆ ಒಪ್ಪಂದಕ್ಕೆ ಸಹಿ
ಮುಂಬರುವ ಈ ಎರಡೂ ಬೈಕುಗಳು ತ್ರಿಕೋನ-ಎಸ್ಕ್ಯೂ ಎಂಜಿನ್ ಕೇಸ್‌ನೊಂದಿಗೆ ಸಿಂಗಲ್-ಸಿಲಿಂಡರ್ ಎಂಜಿನ್‌ನೊಂದಿಗೆ ಕಾಣಿಸಿಕೊಂಡಿವೆ. KTM ಬೈಕ್‌ಗಳಂತೆಯೇ, ಈ ಎಂಜಿನ್ ಕೂಡ ನಾಲ್ಕು-ವಾಲ್ವ್, DOHC ಲೇಔಟ್ ಅನ್ನು ಪಡೆಯುತ್ತದೆ. ಎಕ್ಸಾಸ್ಟ್‌ಗಾಗಿ ವಿಶಿಷ್ಟ ವಿನ್ಯಾಸಗಳನ್ನು ಪಡೆಯುತ್ತವೆ ಎಂದು ಗಮನಿಸಬೇಕಾದ ಅಂಶವಾಗಿದೆ.
ಎಂಜಿನ್ ಸಾಮರ್ಥ್ಯದ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಬಜಾಜ್-ಟ್ರಯಂಫ್ ಬೈಕ್‌ಗಳ ಶ್ರೇಣಿಯು 200 cc ನಿಂದ 250 cc ಸಾಮರ್ಥ್ಯದ ಮೋಟಾರ್‌ನೊಂದಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ ಫೋಟೊಗಳನ್ನ ನೋಡಿದಾಗ ಕಾಣಿಸುವ ದೊಡ್ಡ ಗಾತ್ರದ ಎಂಜಿನ್‌ಗಳು ಬೇರೆ ಕಥೆಯನ್ನೆ ಹೇಳುತ್ತಿವೆ.
ಇವುಗಳು 350 cc – 400 cc ಸಾಮರ್ಥ್ಯದ ಎಂಜಿನ್‌ಗಳಾಗಿರಲೂಬಹುದು, ಈ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.